ಮಂಗಳೂರು: ಕೊಂಕಣಿ ಭಾಷಾ ಕರ್ನಾಟಕ ಇದರ ಕಾರ್ಯಕಾರಿ ಸಭೆಯಲ್ಲಿ ಇತ್ತೀಚೆಗೆ ನಿಧನರಾದ ಕೊಂಕಣಿ ಭಾಷೆಗೆ 27 ಪುಸ್ತಕ ದೇಣಿಗೆ ನೀಡಿದ ಹಿರಿಯ ಸಾಹಿತಿ ಗ್ಲ್ಯಾಡಿಸ್ ರೇಗೊ ಅವರಿಗೆ ಶೃದ್ಧಾಂಜಲಿ ಅರ್ಪಿಸಲಾಯಿತು.
ಈ ವೇಳೆ ಮಾತನಾಡಿದ ಕೆಬಿಎಂಕೆ ಕಾರ್ಯದರ್ಶಿ ರೇಮಂಡ್ ಡಿಕೂನಾ ತಾಕೊಡೆ, ಲೈಬ್ರೆರಿಗಳಲ್ಲಿ ಹುಡುಕಿ ಹಲವು ಸಾಹಿತ್ಯದ ವಿವಿಧ ದಾಖಲೆಗಳನ್ನು ತೆಗೆದು ತನ್ನ ಸ್ವಂತ ಖರ್ಚಿನಲ್ಲಿ ಪುಸ್ತಕ ಪ್ರಕಾಶನ ಮಾಡಿದ ಸಾಹಿತ್ಯದ ಶ್ರಮಜೀವಿ ಗ್ಲ್ಯಾಡಿಸ್ ರೇಗೊ ಆಗಿದ್ದರು ಎಂದು ಗುಣಗಾನ ಮಾಡಿದರು.
ಕವಿ ಜೊಸ್ಸಿ ಪಿಂಟೊ ಮಾತನಾಡಿ, ಕೊಂಕಣಿ ಪತ್ರಿಕೆಗಳಿಗೆ ಪ್ರಸಾರ, ಪ್ರಕಟನೆ ಮಾಡಲು ಆರ್ಥಿಕ ಸಹಾಯ ನೀಡುವ ಮೂಲಕ ಬೆಂಬಲ ನೀಡಿದ್ದರು ಎಂದು ನೆನಪಿಸಿದರು.
ಜೂಲಿಯೆಟ್ ಫೆರ್ನಾಂಡೀಸ್ ಮಾತನಾಡಿ, ಮಹಿಳೆಯರು ಮನೆ ಮಕ್ಕಳು ನೋಡಿಕೊಂಡು ಸಾಹಿತ್ಯದ ಕೆಲಸವನ್ನು ಮಾಡುವುದು ಸುಲಭವಲ್ಲ ಎಂದರು.
ಗ್ಲ್ಯಾಡಿಸ್ ಅವರ ಸಾಹಿತ್ಯದ ಒಡನಾಡಿ ಹಿರಿಯರು ಗೀತಾ ಕಿಣಿಯವರು ಮಾತನಾಡುತ್ತಾ, ತಾನು ಭಾಗವಹಿಸಿದ ಸಾಹಿತ್ಯ ಸಮ್ಮೇಳನಗಳಲ್ಲಿ ರೇಗೊ ಭಾಗವಹಿಸಿ ತನ್ನ ಮತ್ತು ಇತರ ಪುಸ್ತಕ ಮಾರಾಟ ಮಾಡಿ ಸಕ್ರಿಯವಾಗಿ ಇಡೀ ಸಭೆಯಲ್ಲಿ ಜನರಿಗೆ ಸಿಗುತ್ತಿದ್ದರು ಎಂದು ನೆನಪಿಸಿದರು.
ಕೆಬಿಎಂಕೆ ಅಧ್ಯಕ್ಷ ಕೆ ವಸಂತ ರಾವ್ ಮಾತನಾಡಿ, ಕೆಬಿಎಂಕೆ ಸಕಲ ಕೊಂಕಣಿ ಜನರ ಮನೆ. ಇದರಲ್ಲಿ ನಾವು ಎಲ್ಲಾ ಜನರಿಗೆ ಆದ್ಯತೆ ನೋಡುತ್ತೇವೆ. ರೇಗೊ ಪಂಚ್ಕದಾಯಿ ಬಾಳೊಮಾಮ್ ಅವರ ಒಡನಾಡಿ ನಾನು ಕಂಡಿದ್ದೇನೆ ಎಂದರು.
ಖಜಾಂಜಿ ಸುರೇಶ್ ಶೆಣೈ, ಎಡೊಲ್ಫ ಡಿಸೋಜ, ನವೀನ ನಾಯಕ್, ಮೀನಾಕ್ಷಿ ಪೈ, ಝೀನಾ ಫೆರ್ನಾಂಡಿಸ್, ಅರವಿಂದ ಶಾನಭಾಗ್, ಶಾಂತಿ ವೆರೊನಿಕಾ ಹಾಜರಿದ್ದು ಹೂವಿನ ಗೌರವ ಅರ್ಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ