'ನಿಯತಕಾಲಿಕೆಗಳು' ದೇಶ ವಿದೇಶದ ಸುದ್ಧಿಯನ್ನು ಕ್ಷಣಮಾತ್ರದಲ್ಲಿ ಓದುಗರಿಗೆ ನೀಡುವ ಸಾಧನವಾಗಿದೆ. ಸುದ್ಧಿ ಮಾಧ್ಯಮ ಇಂದಿನ ಪ್ರಸ್ತುತ ಕಾಲಘಟ್ಟದಲ್ಲಿ ಬಹಳ ನಾಜೂಕಾಗಿ ಕೆಲಸ ನಿರ್ವಹಿಸಬೇಕಾಗಿದೆ. ಪತ್ರಿಕೆಯ ಒಳಪುಟಗಳಲ್ಲಿ ಎಲ್ಲವೂ ಇದೆ. ನಮಗೆ ಬೇಕಾದ್ದನ್ನು ಸ್ವೀಕಾರ ಮಾಡುವುದು ನಮ್ಮ ಅಭಿರುಚಿಗೆ ಸೇರಿದ ವಿಚಾರ. ಇಂದಿನ ಈ ತಾಂತ್ರಿಕ ಯುಗದಲ್ಲಿ ಪತ್ರಿಕೆ ನಡೆಸುವುದು ಸುಲಭದ ವಿಚಾರವಲ್ಲ. ಬಹಳಷ್ಟು ಪರಸ್ಪರ ಸ್ಪರ್ಧೆಗಳಿದೆ. ಕೊಂಡು ಓದಿ ಪ್ರೋತ್ಸಾಹಿಸೋಣ ಆಗದೇ? ಅಂಗೈಯೊಳಗೆ ಮೊಬೈಲ್ ಎಲ್ಲವನ್ನೂ ಹೇಳುವುದಾದರೂ, ಪತ್ರಿಕೆ ಓದುಗರೂ ಇನ್ನೂ ಇದ್ದಾರೆ ಎನ್ನುವುದೇ ಸಂತಸದ ವಿಚಾರ.
ಬದಲಾವಣೆಯ ಗಾಳಿ ಎಲ್ಲಾ ರಂಗದಲ್ಲೂ ಸಾಮಾನ್ಯ. "ಬದಲಾವಣೆ ಜಗದ ನಿಯಮ"ನಾವು ಹೊಂದಾಣಿಕೆಗೆ ತಯಾರಿರಬೇಕು. ಸಣ್ಣ ಪತ್ರಿಕೆಗಳು, ಆನ್ ಲೈನ್ ಪತ್ರಿಕೆಗಳೂ ಕಾರ್ಯನಿರ್ವಹಿಸುತ್ತಿದೆ. ಮೊದಲ ಪತ್ರಿಕೆ 1843 ಜುಲೈ 1ರಂದು "ಮಂಗಳೂರು ಸಮಾಚಾರ" ಬಿಡುಗಡೆಯ ಈ ದಿನ 'ಕರ್ನಾಟಕದಲ್ಲಿ ಪತ್ರಿಕಾ ದಿನವೆಂದು 'ಆಚರಿಸಲಾಗುವುದು. ಎಲ್ಲಾ ಪತ್ರಿಕಾ ಸಂಪಾದಕರಿಗೂ, ಓದುಗ ಮಿತ್ರರಿಗೂ, ಪತ್ರಕರ್ತರಿಗೂ, ಪತ್ರಿಕೆಯ ಹಿಂದೆ ಅನವರತ ದುಡಿಯುವ ಬಂಧುಗಳಿಗೂ ಶುಭಾಶಯಗಳು.
- ರತ್ನಾ ಕೆ ಭಟ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ