ಕಲಾ ಪ್ರಕಾರದಿಂದ ಧರ್ಮಜಾಗೃತಿಯೊಂದಿಗೆ ಆನಂದ: ಸೂರಿಕುಮೇರು ಗೋವಿಂದ ಭಟ್

Upayuktha
0

 ಸಂಸ್ಕಾರ ಭಾರತೀ ಗುರು ವಂದನಾ ಕಾರ್ಯಕ್ರಮ




ಬಂಟ್ವಾಳ: ಯಾವುದೇ ಕಲಾ ಪ್ರಕಾರ ಧರ್ಮಪ್ರಕಾರ ಧರ್ಮ ಜಾಗೃತಿಯನ್ನು ಮಾಡಬೇಕು. ಆನಂದವನ್ನು ನೀಡಬೇಕು ಎಂದು ಹಿರಿಯ ಯಕ್ಷಗಾನ ಕಲಾವಿದ ದಶಾವತಾರಿ ರಾಷ್ಟ್ರ ಪ್ರಶಸ್ತಿ ವಿಜೇತ ಕೆ. ಗೋವಿಂದ ಭಟ್ ಹೇಳಿದರು.


ಅವರು ಬಿ.ಸಿ. ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ಸಂಸ್ಕಾರ ಭಾರತೀ ದ.ಕ. ಜಿಲ್ಲಾ ಬಂಟ್ವಾಳ ಘಟಕದ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ನಟರಾಜ ಪೂಜನ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.


ಕಲೆ ಎಂಬುದು ಅಮೂರ್ತವಾದುದು. ಕಲೆಗಳ ಮೂಲ ಉದ್ದೇಶವಿರುವುದು ಜನರ ಶಾಂತಿ, ಸಮಾಧಾನ. ಯಕ್ಷಗಾನವು ಸೃಜನಶೀಲ ಕಲೆಯಾಗಿದ್ದು ಕಾಲಕ್ಕೆ ತಕ್ಕಂತೆ ಬದಲಾವಣೆಯಾಗಿದ್ದು, ಸತ್ಯ, ಸಾಕ್ಷಾತ್ಕಾರವೇ ಕಲೆಯ ಪರಮ ಗುರಿ ಎಂದು ಹೇಳಿದರು.


ಹಿರಿಯ ಯಕ್ಷಗಾನ ಕಲಾವಿದ ಶಿವರಾಮ ಜೋಗಿ ಅಭಿನಂದನಾ ಭಾಷಣ ಮಾಡಿ ಮೇರು ವ್ಯಕ್ತಿತ್ವ ಹಾಗೂ ವಿದ್ವತ್ತು ಹೊಂದಿರುವ ಗೋವಿಂದ ಭಟ್ಟರಿಗೆ ತನ್ನೊಂದಿಗೆ ಇತರ ಕಲಾವಿದರನ್ನೂ ರಂಗದಲ್ಲಿ ಬೆಳೆಸಿದ್ದಾರೆ ಎಂದು ಹೇಳಿದರು.


ಅಧ್ಯಕ್ಷತೆ ವಹಿಸಿದ ಸಂಸ್ಕಾರ ಭಾರತೀ ಜಿಲ್ಲಾಧ್ಯಕ್ಷರಾದ ತೇವು ತಾರಾನಾಥ ಕೊಟ್ಟಾರಿ ಮಾತನಾಡಿ, ಸನಾತನ ಹಿಂದೂ ಧರ್ಮದ ಪರಂಪರೆಯೇ ಗುರು- ಶಿಷ್ಯ ಸಂಸ್ಕೃತಿ. ಗುರುವನ್ನು ಮರೆಯದ ಕ್ಷೇತ್ರವಿದ್ದರೆ ಅದು ಕಲಾ ಕ್ಷೇತ್ರ. ಕಲೆಯು ವ್ಯಕ್ತಿಯ ವಿಕಸನದೊಂದಿಗೆ ರಾಷ್ಟ್ರದ ವಿಕಾಸಕ್ಕೆ ಪೂರಕವಾಗಿದೆ.  ಧರ್ಮ ಸಂಸ್ಕೃತಿ, ಸಂಸ್ಕಾರವನ್ನು ಸೇವೆ ಮತ್ತು ತ್ಯಾಗದ ಮೂಲಕ ಉಳಿಸಿ ಬೆಳೆಸುವ ಕಾರ್ಯ ನಡೆಯುತ್ತಿದೆ ಎಂದರು.


ಪ್ರಮುಖರಾದ ಮಾನ್ಯ ಸಂಘಚಾಲಕ  ಡಾ. ಬಾಲಕೃಷ್ಣ ಬಿ.ಸಿ.ರೋಡ್, ಉಪಾಧ್ಯಕ್ಷರಾದ ಶಶಿ ಕುಮಾರ್ ಇಂದ್ರ ವೇಣೂರು, ಕೋಶಾಧಿಕಾರಿ ವಿಜಯ ಶೆಟ್ಟಿ ಸಾಲೆತ್ತೂರ್, ಸಂಕಪ್ಪ ಶೆಟ್ಟಿ ಬಿ. ಸಿ.ರೋಡ್, ಜನಾರ್ದನ ಅಮುoಜೆ ಮತ್ತಿತರರಿದ್ದರು.


ಜಿಲ್ಲಾ ಗೌರವಾಧ್ಯಕ್ಷ ಸರಪಾಡಿ ಅಶೋಕ್ ಶೆಟ್ಟಿ  ಪ್ರಾಸ್ತಾವಿಕ ವಾಗಿ ಮಾತನಾಡಿದರು, ಸಂಸ್ಕಾರ ಭಾರತೀ ಜಿಲ್ಲಾ ಉಪಾಧ್ಯಕ್ಷ ಅನಿಲ್ ಪಂಡಿತ್ ಸ್ವಾಗತಿಸಿ,ಮಾನಸ ಕಡೆಗೋಳಿ ಸಂಸ್ಕಾರ ಧ್ಯೇಯ ಗೀತೆ ಹಾಡಿದರು, ವಿಜಯ ಶೆಟ್ಟಿ ಸಾಲೆತ್ತೂರು ಸನ್ಮಾನ ಪತ್ರವಾಚಿಸಿದರು, ಜಗದೀಶ ಕಡೆಗೋಳಿ ಧನ್ಯವಾದವಿತ್ತರು, ಮಹಿಮಾ ಬಿ. ರೈ ಸಾಲೆತ್ತೂರು ಕಾರ್ಯಕ್ರಮ ನಿರೂಪಿಸಿ,ಜಗದೀಶ ಕಡೆಗೋಳಿ  ವಂದಿಸಿದರು.


 ಸೂರಿಕುಮೇರು ಕೆ ಗೋವಿಂದ ಭಟ್ ರೊಡನೆ ಸಂವಾದ ಕಾರ್ಯಕ್ರಮ ನಡೆಯಿತು.


ಆರಂಭದಲ್ಲಿ ಉಪನ್ಯಾಸಕ ಜಯಾನಂದ ಪೆರಾಜೆ ಹಾಗೂ ಡಾ.ವಾರಿಜ ನಿರ್ಬೈಲು ಇವರು ಗಮಕ ಕಾರ್ಯಕ್ರಮ ನಡೆಸಿಕೊಟ್ಟರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top