ಹಿಂದು ಪಿಯು ಕಾಲೇಜು, ಶಿರ್ವ: ವಿಜ್ಞಾನ ವಿದ್ಯಾರ್ಥಿಗಳಿಗೆ 'ಜ್ಞಾನಾಮೃತ' ಒರಿಯೆಂಟೇಶನ್

Upayuktha
0


ಶಿರ್ವ: ಹಿಂದು ಪಿಯು ಕಾಲೇಜು, ಶಿರ್ವದಲ್ಲಿ ಜ್ಞಾನ ಚೇತನ ಎಜುಕೇಶನ್ ಟ್ರಸ್ಟ್‌ ನ ಸಹಯೋಗದಲ್ಲಿ ‘ಜ್ಞಾನಾಮೃತ - ದಿ ನಾಲೆಜ್ ಸಿರೀಸ್’ "ಕಾರ್ಯಕ್ರಮದ ಅಡಿಯಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗಾಗಿ ಒಂದು ದಿಕ್ಸೂಚಿ ಪ್ರೇರಣಾ ಕಾರ್ಯಕ್ರಮ ದಿನಾಂಕ 22ರಂದು ಮಂಗಳವಾರ ಕಾಲೇಜಿನ ಸಭಾಂಗಣದಲ್ಲಿ ಜರುಗಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ್ಞಾನ ಚೇತನ ಎಜುಕೇಶನ್ ಟ್ರಸ್ಟ್‌ನ ಅಕಾಡೆಮಿಕ್ ಡೀನ್  ಗುರುಪ್ರಸಾದ್ ವಹಿಸಿದ್ದರು. ಮುಖ್ಯ ಸಂಪನ್ಮೂಲ ಉಪನ್ಯಾಸಕರಾಗಿ ಜೀವ ವೈದ್ಯಕೀಯ ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಹಾಗೂ ಮಲೇಷಿಯಾದ ನ್ಯೂಕ್ಯಾಸಲ್ ಯೂನಿವರ್ಸಿಟಿಯ ಸಹ ಡೀನ್ ಡಾ. ರೋಷನ್ ಮಸ್ಕರೇನಸ್ ಭಾಗವಹಿಸಿದ್ದರು. ಅವರು ವಿದ್ಯಾರ್ಥಿಗಳೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡು, ವಿಜ್ಞಾನ ಕ್ಷೇತ್ರದ ಉನ್ನತ ವ್ಯಾಸಂಗ ಪಡೆಯುವಲ್ಲಿರುವ ಅನೇಕ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು.


ಈ ಕಾರ್ಯಕ್ರಮದಲ್ಲಿ ಜ್ಞಾನ ಚೇತನ ಟ್ರಸ್ಟ್‌ನ ಸದಸ್ಯ ಸತೀಶ್ ಕುಮಾರ್  ಹೆಗ್ಡೆ, ಹಿಂದು ಪಿಯು ಕಾಲೇಜಿನ ಪ್ರಾಚಾರ್ಯ ಸುಂದರ್ ಮೆರಾ ಹಾಗೂ ಉಡುಪಿ ಕಂಡಿರಾ ಪ್ರವರ್ತಕ ಮಂಜುನಾಥ್ ಕಾಮತ್ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಕಾಲೇಜಿನ  ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಉಪನ್ಯಾಸಕರು ಹಾಜರಿದ್ದು ಉಪನ್ಯಾಸಕರ ಜೊತೆಸಂವಾದ ನಡೆಸಿದರು. ಅಲ್ವಿನಾ ಕಾರ್ಯಕ್ರಮದ ನಿರೂಪಿಸಿದರು. ದಿವ್ಯಾ ಸ್ವಾಗತಿಸಿದರು. ಆಕಾಶ್ ಧನ್ಯವಾದವಿತ್ತರು.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top