ಜಯನಗರ, ಬೆಂಗಳೂರು: ಸಮುದ್ಬವ ತಂಡದಿಂದ ಗುರು ವಿದುಷಿ ಡಾ. ಪ್ರಿಯಾ ಗಣೇಶ್ ಹಾಗೂ ಅವರ ಪುತ್ರಿ ಕು. ಶರ್ಲೋವಿ ಜಿ ಆತ್ರೇಯ ಅವರು ವಿವಿಧ ನೃತ್ಯ ಪ್ರಕಾರಗಳಲ್ಲಿ ಗುರುಗಳನ್ನು ಸ್ಮರಿಸುವ ವಿಭಿನ್ನ ವಿಶಿಷ್ಟ ಕಾರ್ಯಕ್ರಮ ಇದೇ ಶನಿವಾರ ಆ.2 ರಂದು 5:00ಕ್ಕೆ ನಗರದ ಜಯನಗರ 8ನೇಬ್ಲಾಕ್ ಜೆ.ಎಸ್.ಎಸ್. ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ.
ಸಮಾರಂಭದ ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ರಿಜಿಸ್ಟ್ರಾರ್ ಟಿ.ಜಿ. ನರಸಿಂಹಮೂರ್ತಿ ಮತ್ತು ಹಿರಿಯ ಸಂಗೀತ ಕಲಾವಿದ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ ಭಾಗವಹಿಸುವರು.
ನಟುವಾಂಗದಲ್ಲಿ ವಿದುಷಿ ಪದ್ಮಗಂಧಿನಿ ರಾವ್ ಹುಲಿಕಲ್, ವಿದುಷಿ ಶ್ರೀಯಾ ನಾಯಕ್, ಗಾಯನದಲ್ಲಿ ವಿದ್ವಾನ್ ಆರ್ ಶಂಕರ ಪ್ರಸಾದ್, ವಿದುಷಿ ಡಾ. ಆಶ್ವಿನಿ ಪಿ.ಆರ್, ಮೃದಂಗದಲ್ಲಿ ವಿದ್ವಾನ್ ಪುದುವೈ ಎಸ್ ಭಾರತ್, ವಯೋಲಿನ್ ವಿದ್ವಾನ್ ಟಿ ಶ್ರೀನಿವಾಸನ್, ರಿದಂಪ್ಯಾಡ್ ಮತ್ತು ಕೊಳಲಿನಲ್ಲಿ ವಿದ್ವಾನ್ ಕರಕೈಲ್ ಶರವಣನ್ ಸಹಕರಿಸಲಿದ್ದಾರೆ.
ಸಂಗೀತ ಸಂಯೋಜನೆ: ವಿದ್ವಾನ್ ಆರ್ ಶಂಕರ ಪ್ರಸಾದ್, ವಿದುಷಿ ಅಶ್ವಿನಿ ಪಿ ಆರ್. ಸಾಹಿತ್ಯ: ಉಡುಪಿ ಶ್ರೀ ಪಿ ಸುದರ್ಶನ್, ವಿದ್ವಾನ್ ಆರ್ ಶಂಕರ ಪ್ರಸಾದ್, ಸುಷ್ಮ ಡಿ.ಎಸ್ ನಿರೂಪಣೆ, ಕಲಾಯೋಗಿ ವಿಜಯ ಕುಮಾರ್ ಪ್ರಸಾಧನ, ಕು.ಆವನಿ.ಕೆ, ಲಕ್ಷ್ಮಿ ಅನನ್ಯ, ಅನನ್ಯ ಮನೋಜ್, ಸುಮೇಧ ತಲಗಳ್ಳ, ಅಕ್ಷತ ಎನ್, ಭುವನ ಎಸ್.ಮೊದಲಾದ ಸಹಕಲಾವಿದರು ಭಾಗವಹಿಸಲಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ