ಚನಾಗಿದೆ, ಚನಾಗಿದೆ!
ಈ ಜೀವ ನೀಡುವ ಕಾಯಿದೆಯಿಂದ ಇನ್ನೇನು ಆಗಲಿಕ್ಕಿದೆಯೋ!? ಎಷ್ಟು ಜೀವ ಹೋಗಲಿಕ್ಕಿದೆಯೋ!?
ಕೊನೇ ಪಕ್ಷ ಈ ಹೊಸ ಜೀವ ನೀಡುವ ಕಾಯಿದೆಯ ಪೂರ್ಣ ಮಾಹಿತಿಯನ್ನು ಮೊದಲು ಪ್ರಕಟಿಸಲಿ. ಸಾಧ್ಯತೆ, ಭಾದ್ಯತೆಗಳನ್ನು ಪರಿಶೀಲಿಸಲಿ. ಪರಿಶೀಲನೆ ಸಂದರ್ಭದಲ್ಲಿ ಮಲೆನಾಡ ನೆಲವಾಸಿಗಳನ್ನು, ಪರಿಣಾಮದಿಂದ ಸಂತ್ರಸ್ತರಾಗುವವರನ್ನು ಅಭಿಪ್ರಾಯಕ್ಕಾದರೂ ಸಂಪರ್ಕಿಸಲಿ. ಚರ್ಚೆಯಾಗಲಿ.
ಯಾವುದೋ ಸತ್ತ ಕಾಯಿದೆಗೆ (ಈಗ ಜೀವ ಕೊಡಲಾಗುತ್ತದೆ ಅಂದರೆ, ನೂರು ವರ್ಷದಿಂದ ಅದು ಸತ್ತಿದೆ ಎಂದೇ ಅರ್ಥ ಅಲ್ವಾ!?) ಈಗ ಜೀವ ಕೊಡುವ ಮೊದಲು, ಜೀವ ಇರುವ ನೆಲವಾಸಿಗಳನ್ನು ಪರಿಗಣನೆಗೆ, ವಿಶ್ವಾಸಕ್ಕೆ ಪಡೆಯಲಿ.
ಯಾರೋ ನಗರ ಪರಿಸರವಾದಿಗಳು ಅಭಿಪ್ರಾಯ ಕೊಟ್ರು ಅಂತ ಒಂದು ದಿನ ಆದೇಶ ಹೊರಡಿಸುವುದು, ಮರುದಿನ ಪ್ರತಿಭಟನೆ ಮಾಡುತ್ತಿರುವವರಿಗೆ ಆಶ್ವಾಸನೆ ಕೊಟ್ಟು ಕಾಯಿದೆ ಹಿಂಪಡೆಯುವುದು, ಮರುದಿನ ಮತ್ತೊಂದು ಮೂರ್ಖ ಕಾಯಿದೆಗೆ ಸಹಿ ಮಾಡುವುದು, ನೆನಪಾದರೆ ಅದಕ್ಕೆ ಡೇಟ್ ಹಾಕುವುದು, ಮತ್ತೆ ಮಲೆನಾಡ ಜನರ ಹಾರ್ಟ್ ಬೀಟ್ ಪರಿಶೀಲಿಸುತ್ತ ಜೋಕರ್ ಆಗುವುದು ಬೇಡ!
ಈಗ ಆಗುತ್ತಿರುವಂತೆ!
ಅದಕ್ಕೆ ಮಲೆನಾಡ ನೆಲವಾಸಿಗಳು ಹೇಳುವುದು: ಇಲ್ಲಿಗೇ ಬನ್ನಿ, ಬರುವಾಗ ಪಟಾಲಂ ಬಿಟ್ಟು ಬನ್ನಿ, ತಜ್ಞರನ್ನು (ಬೇಕಾದರೆ ಆ ಸೋ ಕಾಲ್ಡ್ ನಗರ ಪರಿಸರವಾದಗಳನ್ನೂ ಕರ್ಕೊಂಬನ್ನಿ!!) ಕಾಡಂಚಿನ ಮನೆಯಲ್ಲಿ (ಲಕ್ಸುರಿ ಪ್ರವಾಸಿ ಮಂದಿರದಲ್ಲಲ್ಲ) ವಾಸ್ತವ್ಯ ಮಾಡಿ, ನಿಜಸ್ಥಿತಿಗಳನ್ನು ಪರಿಶೀಲಿಸಿ, ಸತ್ತ ಕಾಯಿದೆಗಳಿಗೆ, ಹುಟ್ಟಿಸುವ ಹೊಸ ಕಾಯಿದೆಗಳಿಗೆ ಜೀವ ಕೊಡುವ ಮೊದಲು ಜೀವ ಇರುವವರ ಕಾಲಡಿಯ ನೆಲವನ್ನೊಮ್ಮೆ ಅರ್ಥೈಸಿಕೊಳ್ಳಿ. ಜೀವ ಬರಿಸುವ ಕಾಯಿದೆಗಳು ನೆಲವಾಸಿಗಳ ಜೀವ ತೆಗೆಯದಂತಿರಲಿ.
ನೀವೂ ಬದುಕಿ, ನೆಲವಾಸಿಗಳನ್ನು ಬದುಕಲು ಬಿಡಿ
ಮತ್ತದೇ ಪ್ರಶ್ನೆ: ಬರ್ತೀರಾ?
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ