ಅಂತಾರಾಷ್ಟ್ರೀಯ ಬಾಹ್ಯಾಕಾಶ ವಿದ್ಯಾರ್ಥಿ ಸ್ಪರ್ಧೆ: ಜೈಷಾಗೆ ಸನ್ಮಾನ

Upayuktha
0

ಮಂಗಳ ಗ್ರಹದಲ್ಲಿ ಜನವಾಸ ವಿಶೇಷ ವಿಜ್ಞಾನ ಮಾದರಿಗೆ ಮೆಚ್ಚುಗೆ: ಡಾ. ಕಿರಣ್ ಜಾರ್ಜ್





ಕಲಬುರಗಿ: ಅಮೆರಿಕಾದ ಪೋರಿಡಾದಲ್ಲಿ ನಡೆದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಅಭಿವೃದ್ಧಿ ಸಮ್ಮೇಳನದ ವಿದ್ಯಾರ್ಥಿ ಸ್ಪರ್ಧೆಯಲ್ಲಿ ಪಾಲ್ಗೊಂಡ ಮೆಹ್ತಾ ಶಾಲೆಯ 9 ನೇ ತರಗತಿ ವಿದ್ಯಾರ್ಥಿನಿ ಜೈಷಾ ಫಲಕ್ ಮೋಯಿನ್ ಖಾನ್ ಗೆ ಸೋಮವಾರ (ಜುಲೈ7) ರಂದು ಸಂತ ಮೇರಿ ಶಾಲಾ ಸಭಾಂಗಣದಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು.


ನ್ಯಾಷನಲ್ ಸ್ಪೇಸ್ ಸೊಸೈಟಿ (ಎನ್‌ಎಸ್‌ಎಸ್) ಯು ಅಮೆರಿಕಾದ ಫ್ಲೋರಿಡಾದ ಓರ್ಲಾಂಡ್ ನಲ್ಲಿರುವ ರೋಶನ್ ಹೋಟೆಲ್‌ನಲ್ಲಿ ಏರ್ಪಡಿಸಿದ ಬಾಹ್ಯಾಕಾಶ ಕುರಿತ ವಿದ್ಯಾರ್ಥಿಗಳ ವಿಶೇಷ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಭಾಗವಹಿಸಿದ ಜೈಷಾ ಅವರು ಕಲಬುರಗಿಗೆ ಹೆಮ್ಮೆ ತಂದಿದ್ದಾರೆ.


ವಿಜ್ಞಾನ ಕ್ಷೇತ್ರದಲ್ಲಿ ಮಕ್ಕಳಿಗೆ ಹೆಚ್ಚಿನ ಆಸಕ್ತಿ ಇದ್ದು ಇದಕ್ಕೆ ಅವಕಾಶ ಕಲ್ಪಿಸಿದರೆ ಬೆಳೆಯಲು ಸಾಧ್ಯ ಎಂದು ಕಲಬುರಗಿಯ ಡಿವೈನ್ ನರ್ಸಿಂಗ್ ಸಯನ್ಸ್ ನ ಅಧ್ಯಕ್ಷ ಡಾ. ಕಿರಣ್ ಜಾರ್ಜ್ ಹೇಳಿದರು.


ಜೂನ್ 19 ರಿಂದ 26ರ ವರೆಗೆ ನಡೆದ ಬಾಹ್ಯಾಕಾಶ ಅಭಿವೃದ್ಧಿ ಕುರಿತ ಸ್ಪರ್ಧೆಯಲ್ಲಿ ಮೆಹ್ತಾ ಶಾಲೆಯ ವಿದ್ಯಾರ್ಥಿಗಳ ಗುಂಪಿನಲ್ಲಿ ಜೈಷಾ ಮಂಗಳ ಗ್ರಹದಲ್ಲಿ ಮಾನವರು ವಾಸ ಮಾಡುವ ನಿಟ್ಟಿನಲ್ಲಿ ಮಾದರಿಯನ್ನು ತಯಾರಿಸಿ ಗಮನ ಸೆಳೆದಿದ್ದು 9,000 ಜನರಿಗೆ ಮಂಗಳದಲ್ಲಿ ನೆಲೆ ನಿಲ್ಲುವಂತೆ ಮಾಡುವ ಅವಕಾಶಗಳ ಬಗ್ಗೆ ವಿಜ್ಞಾನ ಮಾದರಿಯಲ್ಲಿ ಪ್ರಸ್ತಾಪಿಸಿ ಗಮನ ಸೆಳೆದಿದ್ದರು. ಈ ಬಗ್ಗೆ ಮಾದರಿ ಪ್ರದರ್ಶನ ವೀಕ್ಷಕರಿಗೆ ವಿವರಣೆ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದರು ಎಂದು ಡಾ. ಕಿರಣ್ ಜಾರ್ಜ್ ಹೇಳಿದರು.


10 ಸಾವಿರ ನಗದು ಪುರಸ್ಕಾರ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಯನ್ನು ಗಮನಿಸಿ ವಿದ್ಯಾರ್ಥಿಯ ಪ್ರತಿಭೆಯನ್ನು ಪ್ರೋತ್ಸಾಹಿಸಲು ಡಿವೈನ್ ನರ್ಸಿಂಗ್ ಸಯನ್ಸ್ ನ ವತಿಯಿಂದ ಹತ್ತು ಸಾವಿರ ನಗದು ಪುರಸ್ಕಾರ ನೀಡಲಾಯಿತು. ಮೈಸೂರು ಪೇಟ ಶಾಲು, ಸ್ಮರಣಿಕೆ ಹೂಗುಚ್ಛ ನೀಡಿ ಸಂತ ಮೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಫಾ. ಜೋಸೆಫ್ ಪ್ರವೀಣ್ ಮತ್ತು ಅಂತಾರಾಷ್ಟ್ರೀಯ ಜಾದೂಗಾರ ಕುದ್ರೋಳಿ ಗಣೇಶ್ ಸನ್ಮಾನಿಸಿದರು. ಜೈಷಾ ಅವರ ತಂದೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಅವರ ಆಪ್ತ ಸಹಾಯಕ ಮೋಯಿನ್ ಖಾನ್ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ, ಸಿಸ್ಟರ್ ರೋನ್ ಆನ್ಸ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ನಂತರ ಕುದ್ರೋಳಿ ಗಣೇಶ್ ಅವರು ವಿದ್ಯಾರ್ಥಿಗಳಿಗಾಗಿ ಸುಮಾರು ಒಂದುವರೆ ಗಂಟೆಗಳ ಕಾಲ "ಶಿಕ್ಷಣಕ್ಕಾಗಿ ಜಾದೂ" ಪ್ರದರ್ಶನ ನೀಡಿ ರಂಜಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top