ಅಂತಾರಾಷ್ಟ್ರೀಯ ಪತ್ರ ಬರವಣಿಗೆ ಸ್ಪರ್ಧೆ: 10ನೇ ತರಗತಿ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈಗೆ ತೃತೀಯ ಸ್ಥಾನ

Upayuktha
0


ಮಣಿಪಾಲ: ಮಣಿಪಾಲದ ಅಕಾಡೆಮಿ ಆಫ್ జನರಲ್ ಎಜುಕೇಶನ್ ಅಂಗ ಸಂಸ್ಥೆಯಾದ ಟಿ.ಎ. ಪೈ ಇಂಗ್ಲಿಷ್ ಮೀಡಿಯಂ ಶಾಲೆ, ಕುಂಜಿಬೆಟ್ಟಿನ 10ನೇ ತರಗತಿಯ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ "UPU 2025- ಯುವಜನರ ಅಂತರರಾಷ್ಟ್ರೀಯ ಪತ್ರ ಬರವಣಿಗೆ ಸ್ಪರ್ಧೆಯಲ್ಲಿ" (ಉಡುಪಿ ವಿಭಾಗ ಮಟ್ಟ) ಮೂರನೆಯ ಸ್ಥಾನವನ್ನು ಗಳಿಸಿದ್ದಾನೆ.


ಭಾರತ ಸರ್ಕಾರದ ಅಂಚೆ ಇಲಾಖೆ, ನವದೆಹಲಿ ಆಯೋಜಿಸಿರುವ ಈ ಸ್ಪರ್ಧೆಯಲ್ಲಿ ದೀಪೇಶ್‌ನ ಅನುಪಮ ಬರವಣಿಗೆ ಮತ್ತು ನಿಪುಣತೆಗೆ ಪ್ರತಿಫಲವಾಗಿ ನಗದು ಬಹುಮಾನ, ಪ್ರಮಾಣಪತ್ರ ಮತ್ತು ಟ್ರೋಫಿಯನ್ನು ನೀಡಿ ಗೌರವಿಸಲಾಯಿತು.


ಮುಖ್ಯ ಶಿಕ್ಷಕಿ ಶ್ರೀಮತಿ ವಿನೋದಾ ಶೆಟ್ಟಿ (+91 94816 13116) ಅವರು “ದೀಪೇಶ್ ದೀಪಕ್ ಶೆಣೈಯ ಸಾಧನೆ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಅವನು ಮಕ್ಕಳ ದೇಶ ಮಟ್ಟದ ಅತ್ಯುನ್ನತ ನಾಗರಿಕ ಸನ್ಮಾನ, ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವುದು ಆತನ ಪ್ರತಿಭೆಗೆ ಮತ್ತಷ್ಟು ಹೊಳಪು ತಂದಿದೆ; ಪದ್ಮಶ್ರೀ ಡಾ. ಟಿ.ಎಂ.ಎ. ಪೈ ಅವರು ಸ್ಥಾಪಿಸಿದ ಈ ಸಂಸ್ಥೆ ತನ್ನ ಸುವರ್ಣ ಮಹೋತ್ಸವದ ಆಚರಣೆಯ ಹೊಸ್ತಿಲಲ್ಲಿರುವ ವೇಳೆಯಲ್ಲಿ ಈ ಸಾಧನೆ ಒಂದು ಮಹತ್ವದ ಅಧ್ಯಾಯ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಮುಖ್ಯ ಶಿಕ್ಷಕಿ ಸೇರಿದಂತೆ ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ಆಡಳಿತೀಯ ಸಿಬ್ಬಂದಿ, ಶಿಕ್ಷಕ ರಕ್ಷಕ ಸಂಘ ಮತ್ತು ಹಳೆಯ ವಿದ್ಯಾರ್ಥಿ ಸಂಘದ ವತಿಯಿಂದ ದೀಪೇಶ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ, ಭವಿಷ್ಯದ ಎಲ್ಲಾ ಯತ್ನಗಳಲ್ಲಿಯೂ ಯಶಸ್ಸಿನ ಶುಭಾಶಯಗಳು ಹಾರೈಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top