ಸಾಮಾನ್ಯ ವರ್ಗಕ್ಕೆ ಸೇರ್ಪಡೆಯಿಂದ ಅನ್ಯಾಯ: ದೈವಜ್ಞ ಬ್ರಾಹ್ಮಣ ಸಮುದಾಯದಿಂದ ಶಾಸಕರಿಗೆ ಮನವಿ

Upayuktha
0

ಮಂಗಳೂರು: ದೈವಜ್ಞ ಬ್ರಾಹ್ಮಣ ಸಮುದಾಯವನ್ನು ಕರ್ನಾಟಕ ಸರಕಾರದ ಶಿಕ್ಷಣದ‌ RTE, ಸ್ಕಾಲರ್ಶಿಪ್ ಇತ್ಯಾದಿಗೆ ಸಂಬಂಧಿಸಿದ SATS ವೆಬ್ ಸೈಟ್ ನಲ್ಲಿ, ಇತರೆ ಹಿಂದುಳಿದ ವರ್ಗ 2ಎ ದಿಂದ ಸಾಮಾನ್ಯ ವರ್ಗಕ್ಕೆ ಸೇರಿಸಿರುವುದು ಅನ್ಯಾಯವಾಗಿದ್ದು, ಕೂಡಲೇ ಸರ್ಕಾರದ ಗಮನಕ್ಕೆ ತಂದು ನ್ಯಾಯ ಒದಗಿಸುವಂತೆ ದೈವಜ್ಞ ಬ್ರಾಹ್ಮಣರ ಚಿನ್ನ– ಬೆಳ್ಳಿ ಕೆಲಸಗಾರರ ಸಂಘದ ಮುಖಂಡರು ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.


ಸಮುದಾಯದ ಮುಖಂಡರ ಅಹವಾಲನ್ನು ಆಲಿಸಿದ ಶಾಸಕರು, ಇದುವರೆಗೂ ದೈವಜ್ಞ ಬ್ರಾಹ್ಮಣ ಸಮಾಜವು ಸಾಮಾಜಿಕವಾಗಿ ಒಬಿಸಿ 2ಎ ಪ್ರವರ್ಗದಲ್ಲಿ ಇತ್ತು. ಅದೇ ರೀತಿಯಲ್ಲಿ ಜಾತಿ ಪ್ರಮಾಣ ಪತ್ರವನ್ನೂ ಸಹ ಪಡೆಯಲಾಗಿದೆ. ಆದರೂ ರಾಜ್ಯ ಕಾಂಗ್ರೆಸ್ ಸರ್ಕಾರವು ಏಕಪಕ್ಷೀಯವಾಗಿ 2025 ರ ಹೊಸ ದಾಖಲಾತಿ ಪ್ರಕ್ರಿಯೆಯಲ್ಲಿ ದೈವಜ್ಞ ಬ್ರಾಹ್ಮಣ ಸಮುದಾಯವನ್ನು (519) ಓಬಿಸಿಯಿಂದ ಸಾಮಾನ್ಯ ವರ್ಗಕ್ಕೆ ಸೇರಿಸಿದೆ. ಯಾವ ಆಧಾರದಲ್ಲಿ ಹೀಗೆ ಮಾಡಲಾಗಿದೆ ಎಂಬ ಸಮಾಜದ ಮುಖಂಡರ ಪ್ರಶ್ನೆ ನ್ಯಾಯಯುತವಾದುದು. ಈ ಬಗ್ಗೆ ಖಂಡಿತವಾಗಿಯೂ ಮುಂಬರುವ ಅಧಿವೇಶನದಲ್ಲಿ ಪ್ರಸ್ತಾಪಿಸಿ ರಾಜ್ಯ ಸರ್ಕಾರದ ಗಮನವನ್ನು ಸೆಳೆಯುತ್ತೇನೆ. ಹೊಸ ದಾಖಲಾತಿ ಪ್ರಕ್ರಿಯೆಯಲ್ಲಿನ ಲೋಪದೋಷವನ್ನು ಸರಿಪಡಿಸಿ ಸಮುದಾಯಕ್ಕೆ ಸಾಮಾಜಿಕ ನ್ಯಾಯವನ್ನು ದೊರಕಿಸಿ ಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.


ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ರವೀಂದ್ರ ಜಿ. ಗೋಕರ್ಣಕರ್, ಕಾರ್ಯದರ್ಶಿ ದರ್ಶನ್ ಸಿ.ಶೇಟ್, ಸಂಘಟನಾ ಕಾರ್ಯದರ್ಶಿ ಸಂದೀಪ್ ಜಿ. ಶೇಟ್, ಚೇತನ್ ಶೇಟ್, ಅರುಣ್ ಜಿ ಶೇಟ್, ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top