ಸುರತ್ಕಲ್: ಭಾರತೀಯ ಸಂಸ್ಕೃತಿ, ಆಚರಣೆಗಳು ವಿಶಿಷ್ಟವಾದವು. ಅತಿಥಿ ಸತ್ಕಾರ ಕ್ರಮ ಮತ್ತು ಕೌಟುಂಬಿಕ ಪದ್ದತಿ, ಆಹಾರ ಪದ್ಧತಿ ವಿಶೇಷ ಮಹತ್ವ ಉಳ್ಳವುಗಳು ಎಂದು ನೆದರಲ್ಯಾಂಡ್ (ಹಾಲೆಂಡ್) ನ ಪೀಟರ್ ಗ್ರೂಬ್ಬೆನ್ ನುಡಿದರು. ಅವರು ಸುರತ್ಕಲ್ ರೋಟರಿ ಕ್ಲಬ್‌ಗೆ ಭೇಟಿ ನೀಡಿ ಮಾತನಾಡಿದರು.
ದಕ್ಷಿಣ ಕನ್ನಡ ಪ್ರಕೃತಿ ಸೌಂದರ್ಯ, ಮಾನವೀಯ ಸಂಬಂಧಗಳು, ಕಲಾರಾಧನೆಗಳಿಗೆ ಪ್ರಸಿದ್ಧವಾಗಿದ್ದು ಇಲ್ಲಿಗೆ ಭೇಟಿ ನೀಡಿರುವುದು ವಿಶೇಷ ಸಂತಸ ತಂದಿದೆ ಎಂದರು. ಇಲ್ಲಿಯ ಆಹಾರ ವೈವಿಧ್ಯತೆ, ಸಾಂಸ್ಕೃತಿಕ ಬಹುತ್ವ ಗಮನ ಸೆಳೆಯುತ್ತದೆ ಎಂದರು.
ರವಿಲೋಚನ ಆಚಾರ್ ಅತಿಥಿಗಳನ್ನು ಪರಿಚಯಿಸಿದರು. ಅಧ್ಯಕ್ಷ ರಾಮಚಂದ್ರ ಬಿ. ಕುಂದರ್ ಸ್ವಾಗತಿಸಿದರು. ಕಾರ್ಯದರ್ಶಿ ರಾಮ್ ಮೋಹನ್ ವೈ. ವಂದಿಸಿದರು. ರೋಟರಿ ಝೋನ್ ಲೆಫ್ಟಿನೆಂಟ್ ಸಂದೀಪ್ ರಾವ್ ಇಡ್ಯಾ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ