ಅನ್ನಪೂರ್ಣೇಶ್ವರಿ ಕಲಾಸಂಘ 10ನೇ ವಾರ್ಷಿಕೋತ್ಸವ ಪೌರಾಣಿಕ ನಾಟಕೋತ್ಸವ

Upayuktha
0


ಹಾಸನ: ಹಾಸನದ ಶ್ರೀ ಅನ್ನಪೂರ್ಣೇಶ್ವರಿ ಕಲಾಸಂಘದ 10ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಜುಲೈ 4 ರಿಂದ 9 ವರೆಗೆ 6 ದಿನ ಪೌರಾಣಿಕ ನಾಟಕೋತ್ಸವವನ್ನು ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಡಿ.ವಿ. ನಾಗಮೋಹನ್ ತಿಳಿಸಿದ್ದಾರೆ.


ಜು.4ರಂದು ಶುಕ್ರವಾರ ಪಿ.ಎಂ. ಮಲ್ಲೇಶ್‌ಗೌಡ್ರು, ರಂಗಸ್ವಾಮಿ ಇವರ ಶ್ರೀ ಚಾಮುಂಡೇಶ್ವರಿ ಕಲಾಸಂಘ, ಹಾಸನ ತಂಡದಿಂದ ಸಂಪೂರ್ಣ ರಾಮಾಯಣ, 5ರಂದು ಶನಿವಾರ ಚಂದ್ರಶೇಖರ್ ಸಿಗರನಹಳ್ಳಿ ಮಂಜು ತಟ್ಟೇಕೆರೆ ಇವರ ಶ್ರೀ ಲಕ್ಷ್ಮೀರಂಗನಾಥ ಸಾಂಸ್ಕೃತಿಕ ಕಲಾಸಂಘ, ಸಿಗರನಹಳ್ಳಿ ತಂಡದಿಂದ ಕುರುಕ್ಷೇತ್ರ, 6ರಂದು ಭಾನುವಾರ ಸತೀಶ್ ಕಬ್ಬತ್ತಿ, ವೈಭವ್ ವೆಂಕಟೇಶ್ ಇವರ ಶ್ರೀ ಅನ್ನಪೂರ್ಣೇಶ್ವರಿ ಕಲಾಸಂಘ ಹಾಸನ ತಂಡದಿಂದ ಚಂಡಾಸುರನ ವಧೆ ನಾಟಕ, 7ರಂದು ಸೋಮವಾರ ಬಾರೇಹೊಸರು ಜವರೇಗೌಡ್ರು, ಹನುಮೇಗೌಡ್ರು ಇವರ ಶ್ರೀ ಬಸವೇಶ್ವರ ಕಲಾಸಂಘ, ಹಾಸನ ತಂಡದಿಂದ ಛಲದೊಳ್ ದುರ್ಯೋಧನ, 8ರಂದು ಮಂಗಳವಾರ ರಮೇಶ್ ಗೌಡಪ್ಪ, ಹೆಚ್.ಎಂ. ಪ್ರಭಾಕರ್ ಇವರ ಹಾಸನಾಂಬ ಕಲಾ ಟ್ರಸ್ಟ್, ಹಾಸನ ತಂಡದಿಂದ ಧರ್ಮರಾಜ್ಯ ಸ್ಥಾಪನೆ ಮತ್ತು 9ರಂದು ಬುಧವಾರ ಸಿ.ಎ. ರಾಮಚಂದ್ರರಾವ್ ಇವರ ಶ್ರೀ ಮಾರುತಿ ಕಲಾ ಬಳಗ, ಬೆಂಗಳೂರು ತಂಡದಿಂದ ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top