ಜು.10; ಹಿಂದೂ ಜನಜಾಗೃತಿ ಸಮಿತಿಯಿಂದ ಗುರುಪೂರ್ಣಿಮಾ ಮಹೋತ್ಸವ

Upayuktha
0

ವಿಷಯ : ಗುರುಪೂರ್ಣಿಮೆಯಂದು ಗುರು ಶಿಷ್ಯ ಪರಂಪರೆಯ ಮೂಲಕ ಧರ್ಮ ರಕ್ಷಣೆಯ ಕಾರ್ಯ ಮಾಡಲು ಹಿಂದೂ ಜನಜಾಗೃತಿ ಸಮಿತಿಯಿಂದ ‘ಗುರುಪೂರ್ಣಿಮಾ ಮಹೋತ್ಸವ’.



ಬೆಂಗಳೂರು : ಹಿಂದೂ ಧರ್ಮದ ಅದ್ವಿತೀಯ ಶ್ರೇಷ್ಠ ಪರಂಪರೆಯೆಂದರೆ ‘ಗುರು-ಶಿಷ್ಯ ಪರಂಪರೆ’ಯಾಗಿದೆ ! ರಾಷ್ಟ್ರ ಮತ್ತು ಧರ್ಮವು ಸಂಕಷ್ಟದಲ್ಲಿರುವಾಗ ಧರ್ಮ ಸಂಸ್ಥಾಪನೆಯ ಮಹಾನ್ ಕಾರ್ಯವನ್ನು ಗುರು-ಶಿಷ್ಯ ಪರಂಪರೆಯು ಮಾಡಿದೆ. ಹಿಂದೆ ಇತಿಹಾಸದಲ್ಲಿ ಜಗದ್ಗುರು ಭಗವಾನ ಶ್ರೀಕೃಷ್ಣನು ಅರ್ಜುನನ ಮೂಲಕ, ಆರ್ಯ ಚಾಣಕ್ಯನು ಚಂದ್ರಗುಪ್ತ ಮೌರ್ಯನ ಮೂಲಕ, ಕರ್ನಾಟಕದಲ್ಲಿ ವಿದ್ಯಾರಣ್ಯರು ಹಕ್ಕ ಬುಕ್ಕರ ಮೂಲಕ ಮತ್ತು ಸಮರ್ಥ ರಾಮದಾಸರು ಛತ್ರಪತಿ ಶಿವಾಜಿ ಮಹಾರಾಜರ ಮೂಲಕ ಧರ್ಮ ರಕ್ಷಣೆಯ ಕಾರ್ಯವನ್ನು ಮಾಡಿದರು. 


ಇಂದು ರಾಷ್ಟ್ರ ಮತ್ತು ಧರ್ಮದ ಮೇಲೆ ಆಘಾತಗಳು ನಡೆಯುತ್ತಿದೆ. ಪುನಃ ಗುರು ಶಿಷ್ಯ ಪರಂಪರೆಯ ಮೂಲಕ ಧರ್ಮಾದಿಷ್ಟಿತ ಸನಾತನ ರಾಷ್ಟ್ರದ ನಿರ್ಮಾಣವನ್ನು ಮಾಡಬೇಕಾಗಿದೆ. ಅದಕ್ಕಾಗಿ, ‘ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಈ ಕೆಳಗಿನ ಸ್ಥಳದಲ್ಲಿ ವಿಶೇಷವಾದ ಗುರುಪೂರ್ಣಿಮಾ ಮಹೋತ್ಸವವನ್ನು ಆಯೋಜನೆ ಮಾಡಲಾಗಿದೆ.


ಕಾರ್ಯಕ್ರಮದ ವಿವರ:

ದಿನಾಂಕ : ಗುರುವಾರ 10 ಜುಲೈ 2025 ಸಂಜೆ : 5.00ಕ್ಕೆ .

ಸ್ಥಳ : ಗಂಗಮ್ಮ ತಿಮ್ಮಯ್ಯ ಕನ್ವೆನ್ಷನ್ ಸೆಂಟರ್, ಬಸವೇಶ್ವರ ನಗರ, ಬೆಂಗಳೂರು.


ವಕ್ತಾರರು :

1.  ಪ್ರಮೋದ್ ಮುತಾಲಿಕ್, ಅಧ್ಯಕ್ಷರು, ಶ್ರೀರಾಮ ಸೇನೆ,

2. ಗುರುಪ್ರಸಾದ್ ಗೌಡ, ರಾಜ್ಯ ಸಂಯೋಜಕರು, ಹಿಂದೂ ಜನಜಾಗೃತಿ ಸಮಿತಿ, ಕರ್ನಾಟಕ.


ಈ ಗುರುಪೌರ್ಣಿಮಾ ಮಹೋತ್ಸವದಲ್ಲಿ ಶ್ರೀ ವ್ಯಾಸಪೂಜೆ, ಹಿಂದೂ ಧರ್ಮದ ರಕ್ಷಣೆ ಕಾರ್ಯ ಮಾಡುವವರಿಗೆ ಸತ್ಕಾರ, ಸ್ವಸಂರಕ್ಷಣೆ ಪ್ರಾತ್ಯಕ್ಷತೆ, ಹಿಂದೂ ಸಮಾಜದ ಸದ್ಯದ ಸ್ಥಿತಿ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯ ಅವಶ್ಯಕತೆ ವಿಷಯದ ಮೇಲೆ ವಕ್ತಾರರ ಮಾರ್ಗದರ್ಶನ ಇರಲಿದೆ. 


ಈ ಗುರುಪೂರ್ಣಿಮೆ ಮಹೋತ್ಸವದಲ್ಲಿ ಹಿಂದೂ ಧರ್ಮ, ಹಿಂದೂ ಸಂಸ್ಕೃತಿ, ಅಧ್ಯಾತ್ಮ, ಬಾಲಸಂಸ್ಕಾರ, ಆಚಾರಧರ್ಮ, ಆಯುರ್ವೇದ, ಪ್ರಥಮ ಚಿಕಿತ್ಸೆ ಮುಂತಾದ ವಿಷಯಗಳ ವಿಶೇಷ ಪ್ರದರ್ಶನ, ಗ್ರಂಥ ಪ್ರದರ್ಶನ ಹಾಗೂ ರಾಷ್ಟ್ರ-ಧರ್ಮಕ್ಕೆ ಸಂಬಂಧಿಸಿದ ಫಲಕಗಳನ್ನು ಪ್ರದರ್ಶಿಸಲಾಗುವುದು.




-ಮೋಹನ ಗೌಡ, ರಾಜ್ಯ ವಕ್ತಾರರು, 

ಹಿಂದೂ ಜನಜಾಗೃತಿ ಸಮಿತಿ, ಕರ್ನಾಟಕ ರಾಜ್ಯ.

ದೂ. 7204082609


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top