ಗುಂಪೆ ರಾಮ ಭಟ್ ನಿಧನ

Chandrashekhara Kulamarva
0


ಕಾಸರಗೋಡು: ಹಿರಿಯ ಕೃಷಿಕ, ಉದ್ಯಮಿ, ಕೊಡುಗೈ ದಾನಿ ಗುಂಪೆ ರಾಮ ಭಟ್ (84) ಅಲ್ಪ ಕಾಲದ ಅಸೌಖ್ಯದಿಂದ ಬುಧವಾರ (ಜು.23) ಮುಂಜಾನೆ 7.50ರ ಸುಮಾರಿಗೆ ತಮ್ಮ ಸ್ವಗೃಹ  ಶ್ರೀಲಕ್ಷ್ಮೀ ನಿವಾಸದಲ್ಲಿ ನಿಧನ ಹೊಂದಿದರು.


ಇವರು ಮಕ್ಕಳಾದ ರಾಧಾಕೃಷ್ಣ, ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ರಾಜಗೋಪಾಲ್ ಮತ್ತು ಪೆರ್ಮುದೆಯ ಗುಂಪೆ ಟ್ರೇಡರ್ಸ್ ಮಾಲಕ ಗೋವಿಂದರಾಜ್ ಅಲ್ಲದೆ ಸೊಸೆಯಂದಿರಾದ ವಿಜಯಪ್ರಭಾ, ಮಂಗಳಗೌರಿ‌ ಹಾಗೂ ರಾಜಶ್ರೀ, ಮೊಮ್ಮಕ್ಕಳು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.


ಅಂತಿಮ ದರ್ಶನ ಪಡೆದ ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಸುಬ್ಬಣ್ಣ ಆಳ್ವ, ಧಾರ್ಮಿಕ ಮುಂದಾಳು ಕೋಳಾರ ಸತೀಶ್ ಚಂದ್ರ ಭಂಡಾರಿ ಸೇರಿದಂತೆ ನೂರಾರು ಮಂದಿ ಆಗಮಿಸಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು. ಮೃತರ ಅಂತ್ಯಕ್ರಿಯೆ ಸಂಜೆ ಗುಂಪೆಯ ಅವರ ಸ್ವಗೃಹ ಶ್ರೀಲಕ್ಷ್ಮೀ ನಿವಾಸದ ಪರಿಸರದಲ್ಲಿ ನಡೆಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top