ಎಸ್.ವಿ.ಎಸ್. ದೇವಳ ಪ.ಪೂ ಕಾಲೇಜು ವಿದ್ಯಾರ್ಥಿ ಸಂಘ ಉದ್ಘಾಟನೆ
ಬಂಟ್ವಾಳ: ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಶಿಸ್ತು ಮತ್ತು ಪರಿಶ್ರಮದಿಂದ ನಿರ್ದಿಷ್ಟವಾದ ಗುರಿಯನ್ನು ಇಟ್ಟುಕೊಂಡು ನಿರಂತರ ಸಾಧನೆ ಮಾಡಬೇಕು. ಕನಸನ್ನು ನನಸು ಮಾಡಲು ಶಿಸ್ತಿನಿಂದ ಅಭ್ಯಾಸ ಮಾಡಬೇಕು.ಆರೋಗ್ಯ ಮತ್ತು ಉತ್ತಮ ಗುಣನಡತೆ ಕಾಪಾಡಿಕೊಳ್ಳಬೇಕು ಎಂದು ಬಂಟ್ವಾಳ ಸ್ವರ್ಣೋದ್ಯಮಿ ಸುರೇಶ್ ಬಾಳಿಗಾ ಹೇಳಿದರು.
ಅವರು ಎಸ್.ವಿ.ಎಸ್ ದೇವಳ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ 2025-26ನೇ ಸಾಲಿನ ವಿದ್ಯಾರ್ಥಿ ಸಂಸತ್ತನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಕಾಲೇಜಿನ ಆಡಳಿತ ಸಮಿತಿಯ ಸದಸ್ಯರಾದ ಬಿ.ಶಿವಾನಂದ ಬಾಳಿಗ, ಬಿ. ಸುಬ್ರಾಯ ನಾಯಕ್, ಪಿ. ಪ್ರಕಾಶ್ ಕಿಣಿ, ನ್ಯಾಯವಾದಿ ವೆಂಕಟ್ರಮಣ ಶೆಣೈ, ಭಾಮಿ ಲಕ್ಷ್ಮಣ ಶೆಣೈ, ಎಸ್ವಿಎಸ್ ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ರೋಶ್ನಿ ತಾರಾ ಡಿಸೋಜ ಉಪಸ್ಥಿತರಿದ್ದರು.
ಪ್ರಾಂಶುಪಾಲ ಎಮ್. ಗಂಗಾಧರ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿ ಜವಾಬ್ದಾರಿ ಘೋಷಣೆ ಮಾಡಿದರು. ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಜಯಾನಂದ ಪೆರಾಜೆ ಶುಭ ಹಾರೈಸಿ ಮಾತನಾಡಿದರು. ಉಪನ್ಯಾಸಕರಾದ ವೆಂಕಟೇಶ ನಾಯಕ್ , ಮಂಜುನಾಥ ಶೆಣೈ ಸಹಕರಿಸಿದರು.
ವಿದ್ಯಾರ್ಥಿ ನಾಯಕಿಯಾಗಿ ವೇದಿಕಾ ದೀಪಕ್ ಗಾರ್ಗಿ, ಕಾರ್ಯದರ್ಶಿಯಾಗಿ ತನುಶ್ರೀ ಪೂಜಾರಿ, ಕ್ರೀಡಾ ಕಾರ್ಯದರ್ಶಿಯಾಗಿ ಅಹಮ್ಮದ್ ಸಾಹಿಲ್, ವಿದ್ಯಾಭ್ಯಾಸ ಕಾರ್ಯದರ್ಶಿಯಾಗಿ ರಾಜರಾಜೇಶ್ವರೀ ಭಟ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮಹಮ್ಮದ್ ಶಕೀರ್, ಶಿಸ್ತು ಸಮಿತಿ ಕಾರ್ಯದರ್ಶಿಯಾಗಿ ಮೋಕ್ಷಿತಾ ಮೊದಲಾದವರು ಸಂಚಾಲಕ ಸುರೇಶ ಬಾಳಿಗರಿಂದ ಪ್ರಮಾಣವಚನ ಸ್ವೀಕರಿಸಿದರು. ಸಂಸ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಸಂಘದ ವಿದ್ಯಾರ್ಥಿಗಳು ಸರಸ್ವತೀ ವಂದನೆ ಬಳಿಕ ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ