ಶುಭನುಡಿ: ಹೊಂದಾಣಿಕೆಯೇ ಬದುಕು

Upayuktha
0


ದುಕು ಎನ್ನುವುದು ವಿಭಜನೆಗೆ ಇರುವಂಥದ್ದಲ್ಲ. ಯಾವುದೇ ಕಷ್ಟ ಬಂದರೂ ಹೊಂದಿಕೊಂಡು ಬಾಳುವುದೇ ಸಂಸಾರದ ಗುಟ್ಟು. ಮನೆ  ವಿಷಯವನ್ನು ಹೊರಗಿನ ಪ್ರಪಂಚಕ್ಕೆ ಹೇಳಬಾರದು. ಸುಖ, ಸಂತೋಷವನ್ನು ಹಂಚಿಕೊಳ್ಳಬಹುದಂತೆ. ಹಾಗೆಂದು ಕಷ್ಟವನ್ನು ಎಲ್ಲರಲ್ಲೂ ಹೇಳಿಕೊಂಡು ಬರುವುದು ಸರಿಯಲ್ಲ. ನಮ್ಮ ಬಗ್ಗೆ ಬೆನ್ನ ಹಿಂದೆ ಆಡಿಕೊಳ್ಳುವವರಿಗೆ, ತಾತ್ಸಾರ ಮಾಡುವವರಿಗೆ ನಾವೇ ದಾರಿ ಮಾಡಿಕೊಡಬಾರದು. 'ಮನೆ ಮಜ್ಜಿಗೆಯನ್ನು ಈಚಲು ಮರದಡಿಯಲ್ಲಿ ಕುಳಿತು ಕುಡಿದ ಹಾಗಾಗಬಹುದು'.


ಇಂದಿನ ಪ್ರಸಕ್ತ ದಿನಗಳಲ್ಲಿ ಹೊಂದಾಣಿಕೆಯ ಕೊರತೆ ಎದ್ದು ಕಾಣುತ್ತದೆ. ಇದಕ್ಕೆ ಸ್ವಾಭಿಮಾನವೋ, ನಾನು ಎನ್ನುವುದೋ, ಅಹಂಕಾರದ ಅಮಲೋ, ಕೈಗೆ ಹಣ ಬರುವುದೋ, ಸಂಪಾದನೆಯ ಮೊತ್ತವೋ, ಸಲುಗೆಯೋ ಅರ್ಥವಾಗುವುದಿಲ್ಲ. ಗುರುಹಿರಿಯರು, ದೇವರು, ಹೆತ್ತವರ ಬಗ್ಗೆ ಭಯಭಕ್ತಿ ಕಡಿಮೆಯಾಗಿರುವುದಂತೂ ಸತ್ಯ. ನಾಲ್ಕು ಜನರ ನಡುವೆ ಮರ್ಯಾದೆ ಹೋಗುವುದಕ್ಕೂ ಇಂದಿನ ಪೀಳಿಗೆ ಯೋಚಿಸುವುದಿಲ್ಲ. ಹಿರಿಯರು ಮರ್ಯಾದೆಗೆ ಅಂಜುತ್ತಿದ್ದರು. 'ಏನೇ ಬರಲಿ 'ವಿಧಿಲಿಖಿತ' 'ಬಂದದ್ದೆಲ್ಲ ಬರಲಿ ಗೋವಿಂದನ ದಯೆಯೊಂದಿರಲಿ' ಹೊಂದಿಕೊಂಡು ಬಾಳೋಣ.


- ರತ್ನಾ ಕೆ ಭಟ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top