ಡಿಜಿಟಲ್ ಸಾಧನ ಬಳಸಿ ಗುಣಮಟ್ಟದ ವಿದ್ಯಾಭ್ಯಾಸ ಪಡೆಯಿರಿ: ಶಾಸಕ ಭರತ್ ರೆಡ್ಡಿ

Upayuktha
0

 


ಬಳ್ಳಾರಿ: ಇದು ಡಿಜಿಟಲ್ ಯುಗ ಬರೀ ಪುಸ್ತಕಗಳನ್ನೇ ನಂಬಿಕೊಂಡರೆ ಸಾಲದು. ನಿಮ್ಮ ಹೆಚ್ಚಿನ ಮತ್ತು ಗುಣಮಟ್ಟದ ವಿದ್ಯಾಭ್ಯಾಸಕ್ಕಾಗಿ ಕಂಪ್ಯೂಟರ್ ಸೇರಿದಂತೆ ಇತರ ಡಿಜಿಟಲ್ ಮಾಧ್ಯಮಗಳನ್ನು ಸಹ ಉಪಯೋಗಿಸಿಕೊಂಡು ಉನ್ನತ ಮಟ್ಟಕ್ಕೆ ಬೆಳೆಯಬೇಕು ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ತಿಳಿಸಿದರು.


ಅವರು ತಮ್ಮ ಕಛೇರಿಯಲ್ಲಿ ಗುರುವಾರ ಸಂಜೆ 23ನೇ ವಾರ್ಡಿನ  ಬಿ. ಮಲ್ಲಯ್ಯ ಅವರ ಪುತ್ರಿ ಪ್ರತಿಭಾವಂತ ವಿದ್ಯಾರ್ಥಿನಿ  ಬಿ.ಅಕ್ಷತಾ ಅವರಿಗೆ ಲ್ಯಾಪ್ ಟ್ಯಾಪ್ ವಿತರಿಸಿ ಮಾತನಾಡಿ, ಅಕ್ಷತಾ ಬಿ.ಇ ವ್ಯಾಸಂಗ ಮಾಡುತ್ತಿದ್ದು, ಅವರ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ಉಚಿತವಾಗಿ ಲ್ಯಾಪ್ ಟಾಪ್ ನೀಡಲಾಗುತ್ತಿದೆ, ಮುಂದಿನ ದಿನಗಳಲ್ಲಿ ಇದೇ ರೀತಿ ಹಂತ ಹಂತವಾಗಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಲಾಗುವುದು ಎಂದು ಶಾಸಕ ಭರತ್ ರೆಡ್ಡಿ ತಿಳಿಸಿದರು.


ಈ  ಸಂದರ್ಭದಲ್ಲಿ ಕಾಂಗ್ರೆಸ್‌ ಮುಖಂಡರಾದ ಹೊನ್ನಪ್ಪ, ಗೋವಿಂದ, ಪಿ. ಕೌಶಿಕ್ ಯಾದವ್, ವಂಶಿ  ಇತರರು ಭಾಗವಹಿಸಿದ್ದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top