ಬ್ರಹ್ಮಾವರ: ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ, ಭಾರತೀಯ ಜನ ಔಷಧಿ ಕೇಂದ್ರ ಮತ್ತು ಸುವರ್ಣ ಎಂಟರ್ಪ್ರೈಸಸ್ ಇದರ ವತಿಯಿಂದ ಶ್ರೀ ವಿಜಯ ಬಾಲನಿಕೇತನ ಮಟಪಾಡಿ ಶ್ರೀ ಚಿತ್ತಾರಿ ಬ್ರಹ್ಮಲಿಂಗ ನಂದಿಕೇಶ್ವರ ದೇವಾಲಯದ ಆವರಣದಲ್ಲಿ ಪಂಚ ಪವಿತ್ರ ಗಿಡ ನಾಟಿ ಹಾಗೂ ದೇವತಾರಾಧನೆಗೆ ಬೇಕಾಗುವ ಸುಮಾರು 9 ವಿವಿಧ ತಳಿಗಳ ಹೂ ನೀಡುವ ಗಿಡಗಳ ವನ ನಿರ್ಮಾಣ ನಡೆಸಲಾಯಿತು.
ಈ ಸಂದರ್ಭದಲ್ಲಿ ಜಯಂಟ್ಸ್ ಅಧ್ಯಕ್ಷ ಅಣ್ಣಯ್ಯದಾಸ್, ಪೂರ್ವ ಫೆಡರೇಶನ್ ಅಧ್ಯಕ್ಷ ಮಧುಸೂಧನ್ ಹೇರೂರು, ಸದಸ್ಯ ರಾಘವೇಂದ್ರ ಪ್ರಭು ಕರ್ವಾಲು, ವಿಜಯ ಬಾಲ ನಿಕೇತನ ಸಂಸ್ಥೆಯ ಅಧ್ಯಕ್ಷ ಗಿರೀಶ್ಚಂದ್ರ ಆಚಾರ್ಯ, ಟ್ರಸ್ಟಿಗಳಾದ ಮುದ್ದು ಜತ್ತನ್ನ, ಜಯರಾಮ್ ನಾಯರಿ, ವಿಶ್ವನಾಥ ಶೆಟ್ಟಿ ಮುಂತಾದವರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ