ಮಂಗಳೂರು: ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಕನ್ನಡ ಚುಟುಕು ಸಾಹಿತ್ಯ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಘಟಕ ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಸಂಯುಕ್ತ ಆಶ್ರಯದಲ್ಲಿ ಮನೆ ಮನೆ ಕನ್ನಡ ಜಾಗೃತಿ ಅಭಿಯಾನ -2 ಕಾರ್ಯಕ್ರಮದಲ್ಲಿ ಸಾಧಕ ಸನ್ಮಾನ ಹಾಗೂ ಕವಿಗೋಷ್ಟಿಯು ಘಟಕದ ದ.ಕ ಜಿಲ್ಲಾಧ್ಯಕ್ಷ ಡಾ ಕೊಲಚಪ್ಪೆ ಗೋವಿಂದ ಭಟ್ಟರ ಹ್ಯಾಟ್ ಹಿಲ್ ಅಪಾರ್ಟ್ಮೆಂಟ್‌ನಲ್ಲಿ ಜುಲೈ 27 ರ ಭಾನುವಾರ ನಡೆಯಿತು.
ಮಂಗಳೂರು ಆಕಾಶವಾಣಿ ನಿವೃತ್ತ ನಿರ್ದೇಶಕರಾದ ಪಿ ಸೂರ್ಯನಾರಾಯಣ ಭಟ್, ಕಥಾಬಿಂದು ಪ್ರಕಾಶನದ ಪಿ.ವಿ ಪ್ರದೀಪ್ ಕುಮಾರ್ ಮತ್ತು ಚಿತ್ರಕಲಾ ಸಾಧಕ ಜಿ.ಕೆ ಮಾಧವ ರಾವ್ ಅವರನ್ನು ಸನ್ಮಾನಿಸಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲ್ಲಚ್ಚು ಪ್ರಕಾಶನದ ಮಹೇಶ್ ಆರ್ ನಾಯಕ್ ವಹಿಸಿದ್ದರು.
ವಾಮನ ರಾವ್ ಬೇಕಲ್ ಉದ್ಘಾಟಿಸಿ ಸಂಸ್ಥೆಯ ಧ್ಯೇಯೋದ್ದೇಶಗಳನ್ನು ತಿಳಿಸಿದರು. ಕವಿಗೋಷ್ಠಿ ಅಧ್ಯಕ್ಷ ಮಂಗಳೂರಿನ ಶಸ್ತ್ರ ಚಿಕಿತ್ಸಕ ಹಾಗೂ ಬರಹಗಾರ ಡಾ. ಸುರೇಶ ನೆಗಳಗುಳಿ ಮಾತನಾಡುತ್ತ, ಮನೆ ಮನೆ ಕವಿಗೋಷ್ಠಿಯು ಸರ್ವ ಸಾಕ್ಷರ ಸಂದೇಶವಾಗಲಿ, ಹೊಸ ಕವಿಗಳನ್ನು ಹುಟ್ಟು ಹಾಕಲಿ ಎಂದರು. ಅವರು ವಾಚನ ಮಾಡಿದ ಎಲ್ಲಾ ಕವಿಗಳ ಗುಣಗಾನ ಮಾಡಿ ಸ್ವರಚಿತ ಒಪ್ಪಸಾಲೆ ಗೀತೆ ಹಾಗೂ ಗಜಲ್ ವಾಚಿಸಿದರು.
ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ ವಸಂತ ಕುಮಾರ್ ಪೆರ್ಲ ಅವರು ಮುಖ್ಯ ಅತಿಥಿಯ ನೆಲೆಯಲ್ಲಿ ಈ ರೀತಿಯ ಕಾರ್ಯಕ್ರಮದಲ್ಲಿ ಅಸು ಪಾಸಿನ ಜನರೂ ಭಾಗವಹಿಸುವಂತಾಗಲಿ ಎಂದರು.
ರಾಜ್ಯಸಂಚಾಲಕಿ ಶಾಂತಾ ಪುತ್ತೂರು ಮತ್ತು ರಾಜ್ಯ ಅಧ್ಯಕ್ಷ ಜಯಾನಂದ ಪೆರಾಜೆ ಸಂಸ್ಥೆಯ ಚಟುವಟಿಕೆಗಳ ಪಕ್ಷಿನೋಟ ಬೀರಿದರು. ಶ್ರೀಮತಿ ಲಕ್ಶ್ಮೀ ವಿ ಭಟ್, ಉಮೇಶ ಕಾರಂತ, ಸತ್ಯವತಿ ಭಟ್ ಕೊಳಚಿಪ್ಪು, ಶ್ರೀಮತಿ ಅಕೃತಿ ಭಟ್, ಶ್ರೀಮತಿ ಅನಿತಾ ಶೆಣೈ, ಶ್ರೀಮತಿ ಸೌಮ್ಯ ಅಂಗ್ರಾಜೆ, ಶ್ರೀಮತಿ ಸುಲೋಚನಾ ನವೀನ್, ಮನ್ಸೂರ್ ಮೂಲ್ಕಿ, ಶ್ರೀಮತಿ ಕಸ್ತೂರಿ ಜಯರಾಮ್, ಪುಟಾಣಿ ಅಹನ, ಅಪೂರ್ವ ಕಾರಂತ್ ಸ್ವರಚಿತ ಕವನ ವಾಚಿಸಿದರು.
ಸುಲೋಚನಾ ನವೀನ್ ಪ್ರಾರ್ಥನೆ ನೆರವೇರಿಸಿದರು. ಕೊಲ್ಚಪ್ಪೆ ಗೋವಿಂದ ಭಟ್ ಸ್ವಾಗತಿಸಿ, ಸರಸ್ವತಿ ಬಿ ಭಟ್ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ