ಆ.1: ಸರಿಗಮ ಭಾರತೀ ಸಂಗೀತ ವಿದ್ಯಾಲಯದಿಂದ ಸಂಗೀತ ಸಮರ್ಪಣೆ

Chandrashekhara Kulamarva
0


ಪರ್ಕಳ: ಸರಿಗಮ ಭಾರತಿ ಸಂಗೀತ ವಿದ್ಯಾಲಯ, (ರಿ)ಕುಕ್ಕುದಕಟ್ಟೆ, ಪರ್ಕಳ  ಇದರ ವೇದಿಕೆಯಲ್ಲಿ ಶುಕ್ರವಾರ (ಆಗಸ್ಟ್‌ 1) ಗಡಿನಾಡಿನ ಧೀರೆ ದಿ. ತೊಟ್ಟೆತ್ತೋಡಿ ಪ್ರೇಮ ಕೆ. ಭಟ್ ಇವರ ಸಂಸ್ಮರಣಾ ಕಾರ್ಯಕ್ರಮ ಸಂಜೆ 4.00 ಗಂಟೆಗೆ ನಡೆಯಲಿದೆ. ಮಂಗಳೂರಿನ ಮಂಗಳಾ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ.ಪಿ. ಗಣಪತಿ ಭಟ್, ಶ್ರೀ ರಾಜಾರಾಮ ಮೀಯಪದವು, ಕಸಾಪ ಕೇರಳ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶನಾರಾಯಣ ಭಾಗವಹಿಸಲಿದ್ದಾರೆ.


ನಂತರ ಸಂಸ್ಮರಣಾ ಸಂಗೀತ ಕಛೇರಿಯನ್ನು 5.00 ಗಂಟೆಗೆ ಮೈಸೂರಿನ ವಿದ್ವಾನ್ ಎನ್.ಆರ್. ಪ್ರಶಾಂತ್ ನಡೆಸಿಕೊಡಲಿದ್ದಾರೆ. ಅವರಿಗೆ ವಯಲಿನ್ ನಲ್ಲಿ ತನ್ಮಯಿ ಉಪ್ಪಂಗಳ ಹಾಗೂ ಮೃದಂಗದಲ್ಲಿ ಸುನಾದ ಕೃಷ್ಣ ಅಮೈ ಸಹಕರಿಸಲಿದ್ದಾರೆ ಎಂದು ಸಂಸ್ಥೆಯ ನಿರ್ದೇಶಕಿ ಉಮಾಶಂಕರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top