ಜಯ ಜಯ ಪಂಢರೀರಾಯ
ಜಯ ಜಯ ರುಕ್ಮಿಣಿ ಪ್ರಿಯ
ಜಯ ಜಯ ಗಾಯನ ಪ್ರಿಯ
ಜಯ ಜಯ ಮಹಾರಾಯಾ || ಅ. ಪ ||
ಬಂದು ಇಟ್ಟಿಗೆ ಮೇಲೆ ನೀ ನಿಂತೆ
ಭಕುತನ ತವಕದಿ ಪರೀಕ್ಷಿಸಬೇಕಂತೆ
ಪುಂಡರಿಕನ ಭಕ್ತಿಗೆ ಮೆಚ್ಚಿ ನೀ ನಿಂತೆ
ಪಾಂಡುರಂಗ ಭಕ್ತವತ್ಸಲ ನೀನಂತೆ
ಎರಡೂ ಕರಗಳ
ಟೊಂಕದಮೇಲಿಟ್ಟು
ನೋಡುವೆ ದೇವಾ ಭಕ್ತರ ಗಮನವಿಟ್ಟು
ರಕ್ಷಿಸುವೆ ಎಮ್ಮನು ವರಗಳ ಕೊಟ್ಟು
ಈಕ್ಷಿಸಿ ನಲಿವೆ ಕೃಪಾದೃಷ್ಟಿ ನೆಟ್ಟು || 2 ||
ಕೊರಳಲಿ ಧರಿಸಿ ತುಳಸಿಹಾರ
ನೊಸಲಲಿ ಬುಕ್ಕಿಟು
ಗಂಧಾಲಂಕಾರ
ಶರಣು ಶ್ರೀಹರಿ ಭಕ್ತರೋದ್ಧಾರ
ನೆನೆವೆ ಅನುದಿನ ರುಕ್ಮಿಣಿ ವಿಠಲರ || 3 ||
- ರೇಖಾ ಮುತಾಲಿಕ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ