ದೇಲಂತಬೆಟ್ಟು: SKDRDP ಅಳಿಕೆ ವಲಯದ ಶಾಲೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ

Chandrashekhara Kulamarva
0

ವಿಟ್ಲ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವಿಟ್ಲ ತಾಲೂಕು ಅಳಿಕೆ ವಲಯದ ವತಿಯಿಂದ ಪರಿಸರ ದಿನವನ್ನು  ದೇಲಂತಬೆಟ್ಟು ದ.ಕ.ಜಿ.ಪಂ.ಉ.ಪ್ರಾ ಶಾಲೆಯಲ್ಲಿ ಇಂದು ಆಚರಿಸಲಾಯಿತು.


ಒಕ್ಕೂಟ ಉಪಾಧ್ಯಕ್ಷ ಚಂದ್ರಶೇಖರ ಪೂಜಾರಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಜ್ಞಾನ ದೀಪ ಶಿಕ್ಷಕ ಶಶಾಂಕ್ ಸ್ವಾಗತಿಸಿದರು. ಪ್ರಾಸ್ತಾವಿ ವಿಕವಾಗಿ ವಲಯದ ಮೇಲ್ವಿಚಾರಕಿ ಮೀನಾಕ್ಷಿ ಮಾತನಾಡಿದರು. ಪರಿಸರ ಜಾಗೃತಿ ಬಗ್ಗೆ ಶಾಲಾ ಅಧ್ಯಾಪಕರಾದ ಉದಯ ಅವರು ಮಾಹಿತಿ ನೀಡಿದರು.


ವೇದಿಕೆಯಲ್ಲಿ ಜ್ಞಾನ ವಿಕಾಸ ಸಮನ್ವಯಾಧಿಕಾರಿ ದೀಪ, ಶಾಲಾ ಶಿಕ್ಷಕ ಸವಿತ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ರವೀಶ, ಪುಟ್ಟಣ್ಣ, ಗಣೇಶ, ಚಂದ್ರಶೇಖರ, ಕುಶಾಲಪ್ಪನವರ ಉಪಸ್ಥಿತರಿದ್ದರು.


ಸೇವಾ ಪ್ರತಿನಿಧಿ ಪೂರ್ಣಿಮ ನಿರ್ವಹಿಸಿದರು. ಶಾಲಾ ಶಿಕ್ಷಕಿ ಸವಿತಾ ವಂದಿಸಿದರು. ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆ ನಡೆಸಿ ಬಹುಮಾನ  ವಿತರಿಸಲಾಯಿತು. ಶಾಲಾ ಮಕ್ಕಳಿಗೆ ಸಸಿ ವಿತರಣೆ ಮಾಡಿ ಸಸಿಗಳನ್ನು ನೆಡಲಾಯಿತು.


إرسال تعليق

0 تعليقات
إرسال تعليق (0)
To Top