ಜುಲೈ 20 ; ಕ.ಸು.ಸ.ಪ.ದ. ಸರ್ವ ಸದಸ್ಯರ ಮಹಾಸಭೆ

Chandrashekhara Kulamarva
0


ದಾವಣಗೆರೆ: ಕರ್ನಾಟಕ ಸುಗಮ ಸಂಗೀತ ಪರಿಷತ್‌ನ ಸರ್ವ ಸದಸ್ಯರ ಮಹಾಸಭೆಯನ್ನು ಜುಲೈ 20 ರಂದು ಭಾನುವಾರ ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಬನಶಂಕರಿ ಬಡಾವಣೆಯ, 2ನೇ ಹಂತದ, 9ನೇ ಮುಖ್ಯ   ರಸ್ತೆಯಲ್ಲಿರುವ ವಿಹಾರ ಕೇಂದ್ರದ ಹತ್ತಿರ ಆರ್.ಅಶೋಕ್‌ರವರ ಶಾಸಕರ ಕಛೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ವಿ.ಪ್ರವೀಣ್ ತಿಳಿಸಿದ್ದಾರೆ.


ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ರಾಜ್ಯಾಧ್ಯಕ್ಷರಾದ ವೈ.ಕೆ.ಮುದ್ದುಕೃಷ್ಣರವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಭೆಯಲ್ಲಿ ಇತ್ತೀಚಿಗೆ ಕೀರ್ತಿಶೇಷರಾದ ಸಾಹಿತಿಗಳು, ಕವಿಗಳ ಶ್ರದ್ಧಾಂಜಲಿ, 2024-25ನೆ ಸಾಲಿನ ಲೆಕ್ಕಪತ್ರ ಮಂಡನೆ, ಅನುಮೋದನೆ, ವಾರ್ಷಿಕ ವರದಿ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆಯ ಕುರಿತು ಚುನಾವಣೆ, 19ನೇ ರಾಜ್ಯ ಮಟ್ಟದ ಸುಗಮ ಸಂಗೀತ ಸಮ್ಮೇಳನ “ಗೀತೋತ್ಸವ-2025” ಹಮ್ಮಿಕೊಳ್ಳುವ ಬಗ್ಗೆ ವಿಚಾರ ವಿನಿಮಯ ನಡೆಯಲಿದೆ ಎಂದು  ಪರಿಷತ್ತಿನ ರಾಜ್ಯ ಸಮಿತಿಯ ಖಜಾಂಚಿ ಪ್ರಶಾಂತ್ ಉಡುಪ ತಿಳಿಸಿದ್ದಾರೆ.


ಈ ಮಹ್ವತ್ವಪೂರ್ಣ ಮಹಾಸಭೆ ಯಶಸ್ವಿಗೊಳಿಸಲು ಕರ್ನಾಟಕದ ಎಲ್ಲಾ ಜಿಲ್ಲಾ, ತಾಲ್ಲೂಕಿನ ಪದಾಧಿಕಾರಿಗಳು ಸರ್ವ ಸದಸ್ಯರು ಆಗಮಿಸಬೇಕಾಗಿ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ದಾವಣಗೆರೆ ಜಿಲ್ಲಾಧ್ಯಕ್ಷರಾದ ಸಾಲಿಗ್ರಾಮ ಗಣೇಶ್ ಶೆಣೈ ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 9886333457, 9686454626 ಈ ಸನೀಹವಾಣಿಗಳಿಗೆ ಸಂಪರ್ಕಿಸಬಹುದು.



إرسال تعليق

0 تعليقات
إرسال تعليق (0)
To Top