ಕದಂಬ, ಚಾಲುಕ್ಯ, ರಾಷ್ಟ್ರಕೂಟರ ಸ್ಮರಣೆ; ಪ್ರಶಸ್ತಿ ಪ್ರದಾನ, ‘ಚಿಂತನ ಚೈತ್ರ’ ಲೋಕಾರ್ಪಣೆ

Upayuktha
0

ವಿಶ್ವಾಸ್ ಡಿ. ಗೌಡರ 5ನೇ ಕೃತಿ 




ಸಕಲೇಶಪುರ: ಕದಂಬ ಸೈನ್ಯ ಕನ್ನಡ ಸಂಘಟನೆಯ ವತಿಯಿಂದ ಕದಂಬ, ಚಾಲುಕ್ಯ ಹಾಗೂ ರಾಷ್ಟ್ರಕೂಟ ಚಕ್ರವರ್ತಿಗಳ ಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಇಂದು (ಜುಲೈ 17) ಬೆಳಿಗ್ಗೆ 11 ಗಂಟೆಗೆ ಮಂಡ್ಯ ನಗರದ ಗಾಂಧಿ ಭವನದಲ್ಲಿ ನಡೆಯಿತು. 


ಕಾರ್ಯಕ್ರಮವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಉದ್ಘಾಟಿಸಿದರು. ಬೇಕ್ರಿ ರಮೇಶ್ ಅಧ್ಯಕ್ಷತೆ ವಹಿಸಿದರು.

ಮೈಸೂರು ವಿವಿಯ ಮಾಜಿ ಸೆನಟ್ ಸದಸ್ಯ ಈ.ಸಿ. ನಿಂಗರಾಜ್‌ಗೌಡ, ಸದ್ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಹರೀಶ್ ಕುಮಾರ್ ಎಂ.ಕೆ., ಮೈಷುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.


ಈ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ, ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಖ್ಯಾತ ಲೇಖಕ ವಿಶ್ವಾಸ್. ಡಿ. ಗೌಡ ಅವರ ಐದನೇ ಕೃತಿ “ಚಿಂತನ ಚೈತ್ರ” ಲೋಕಾರ್ಪಣೆಗೊಂಡಿತು.


“ಕತ್ತರಿ ಘಟ್ಟ ಮತ್ತು ಹರಿಸೇವಾ”, “ನೆನಪುಗಳ ಖಾತೆ”, “ಬಾಳೊಂದು ಚೈತ್ರಾಮಯ”, “ಚೈತ್ರದ ಚೈತನ್ಯ” ಮುಂತಾದ ಕೃತಿಗಳ ಮೂಲಕ ಸಾಹಿತ್ಯ ಲೋಕದಲ್ಲಿ ಪಾದಾರ್ಪಣೆ ಮಾಡಿದ ವಿಶ್ವಾಸ್. ಡಿ.ಗೌಡ, ಈ ಬಾರಿ ತಮ್ಮ ಅಂಕಣ ಬರಹಗಳ ಸಂಕಲನದ ರೂಪದಲ್ಲಿ "ಚಿಂತನ ಚೈತ್ರ " ಎಂಬ ವಿಶಿಷ್ಟ ಕೃತಿಯನ್ನು ತಂದಿದ್ದಾರೆ.


ಪತ್ರಿಕೆಗಳಲ್ಲಿ ಪ್ರಕಟವಾದ ಇವರ ಅಂಕಣ ಬರಹಗಳು ವಾಚಕರಿಂದ ಮೆಚ್ಚುಗೆ ಪಡೆದಿದ್ದು, ಅದೇ ಬರಹಗಳು ಈ ಸಂಕಲನದಲ್ಲಿ ಅರ್ಥಪೂರ್ಣವಾದ ರೂಪ ಪಡೆದಿವೆ. ಈ ವಿಮರ್ಶಾತ್ಮಕ ಬರಹಗಳು ಹಾಗೂ ಹೊಸದಾಗಿ ಬರೆಯಲಾಗಿರುವ ಕೃತಿಗಳು ಮುದ್ರಣ ಹಂತದಲ್ಲಿವೆ ಎಂಬುದು ಗಮನಾರ್ಹವಾಗಿದೆ.



إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top