ಲ್ಯಾಂಡ್‌ಲಿಂಕ್ಸ್‌ ಬಡಾವಣೆಯಲ್ಲಿ ಮನೆಯ ಕಂಪೌಂಡ್‌ಗೆ ಡಿಕ್ಕಿ ಹೊಡೆದ ಬಸ್

Upayuktha
0


ಮಂಗಳೂರು: ನಗರದ ಲ್ಯಾಂಡ್‌ಲಿಂಕ್‌ ಬಡಾವಣೆಯಲ್ಲಿ ಇಂದು ಸಂಜೆ 4:30ರ ಸುಮಾರಿಗೆ ಕೆಎಸ್ಸಾರ್ಟಿಸಿ ಸಿಟಿ ಬಸ್‌ ಚಾಲಕನ ನಿಯಂತ್ರಣ ತಪ್ಪಿ ಮನೆಯೊಂದಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.


ದೈನಂದಿನ ಟ್ರಿಪ್‌ನಂತೆ ಬಡಾವಣೆಗೆ ಬಂದಿದ್ದ ಬಸ್ ಹಿಂದಿರುಗಿ ಬಜಾಲ್‌ಪಡ್ಪು ವಿಗೆ ಹೊರಡಲು ಅನುವಾಗುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮನೆಯೊಂದರ ಕಂಪೌಂಡ್ ಗೋಡೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಂಪೌಂಡ್ ಗೋಡೆ ಒಡೆದು ಹೋಗಿ ಬಸ್ ಮನೆಯ ಗೋಡೆಗೆ ತಾಗಿಕೊಂಡು ನಿಂತಿದೆ.


ಅದೃಷ್ಟವಶಾತ್ ಬಸ್ಸಿನಲ್ಲಿ ಪ್ರಯಾಣಿಕರು ಯಾರೂ ಇರಲಿಲ್ಲ. ಚಾಲಕ ಮ್ತು ಕಂಡಕ್ಟರ್ ಮಾತ್ರ ಇದ್ದರು. ಅಲ್ಲದೆ, ಮನೆಯಲ್ಲಿದ್ದವರಿಗೂ ಅಪಾಯವಾಗಿಲ್ಲ.


ನಂತರ ಕೆಎಸ್ಸಾರ್ಟಿಸಿ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬಂದು ಘಟನೆಯ ವಿವರ ಪಡೆದುಕೊಂಡು ಬಸ್ಸನ್ನು ಡಿಪೋಗೆ ಎಳೆದೊಯ್ದರು.


ನಿಲುಗಡೆ ಮಾಡಿದ್ದ ಬಸ್‌ ಸ್ಟಾರ್ಟ್ ಆಗದೆ ಇದ್ದಾಗ ಚಾಲಕ ಎಂಜಿನ್ ಚಾಲೂ ಮಾಡುವ ಪ್ರಯತ್ನದಲ್ಲಿದ್ದರು. ಅಗ ಇದ್ದಕ್ಕಿದ್ದಂತೆ ಬಸ್ ಚಲಿಸಿ, ಬ್ರೇಕ್‌ ವೈಫಲ್ಯಗೊಂಡು ಮನೆಯ ಕಂಪೌಂಡ್ ಗೆ ಡಿಕ್ಕಿ ಹೊಡೆಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.


ಕೆಎಸ್ಸಾರ್ಟಿಸ್‌ ಬಸ್‌ಗಳ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ದೂರುಗಳು ಪದೇ ಪದೆ ಕೇಳಿ ಬರುತ್ತಿವೆ. ಅಲ್ಲಲ್ಲಿ ಬಸ್‌ಗಳು ಅರ್ಧಕ್ಕೆ ನಿಂತು ಪ್ರಯಾಣ ಸ್ಥಗಿತಗೊಳಿಸುವುದು ಪದೇ ಪದೇ ರಾಜ್ಯದ ನಾನಾ ಭಾಗಗಳಿಂದ ವರದಿಯಾಗುತ್ತಿದೆ. ಬಸ್ಸಿನ ಅಸಮರ್ಪಕ ನಿರ್ವಹಣೆಯ ಕಾರಣದಿಂದ ಇಂದಿನ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top