ಸೇಂಟ್‌ ಜೋಸೆಫ್‌ ವಿವಿ: ಅಡ್ವಾನ್ಸ್‌ಡ್‌ ಕಂಪ್ಯೂಟಿಂಗ್ ವಿದ್ಯಾರ್ಥಿ ಸಂಘಟನೆಗಳ ಪದಗ್ರಹಣ

Upayuktha
0





ಬೆಂಗಳೂರು: ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದ ಅಡ್ವಾನ್ಸ್ಡ್ ಕಂಪ್ಯೂಟಿಂಗ್ ವಿಭಾಗದ ವಿದ್ಯಾರ್ಥಿ ಸಂಘಟನೆಗಳಾದ ಸಿಗ್ಮಾ ಸ್ಕ್ವೇರ್ಡ್ ಮತ್ತು ಅನಾಲಿಟಿಕಾ ಸಂಸ್ಥೆಗಳ ಪದಗ್ರಹಣ ಸಮಾರಂಭ ಗುರುವಾರ (ಜು.24) ನಡೆಯಿತು.


ಸಾಂಪ್ರದಾಯಿಕ ಸ್ವಾಗತದ ಬಳಿಕ ವಿಶ್ವವಿದ್ಯಾಲಯದ ಗಾಯನ ತಂಡವು ಪ್ರಾರ್ಥನೆ ಗೀತೆಯನ್ನು ಹಾಡಿದರು. ವಿದ್ಯಾರ್ಥಿಗಳಿಂದ ಸ್ವಾಗತ ನೃತ್ಯ  ಪ್ರದರ್ಶನ ನೆರವೇರಿತು. ಬಳಿಕ ಗಣ್ಯರಿಂದ ದೀಪ ಬೆಳಗಿಸಿ ಉದ್ಘಾಟಿಸುವ ಮೂಲಕ ಜ್ಞಾನ, ಬೆಳಕು ಮತ್ತು ಹೊಸ ಶೈಕ್ಷಣಿಕ ಅವಧಿಯ ಶುಭಾರಂಭವನ್ನು ಸಂಕೇತಿಸಿದರು.


ಅಡ್ವಾನ್ಸ್ಡ್ ಕಂಪ್ಯೂಟಿಂಗ್ ವಿಭಾಗದ ಮುಖ್ಯಸ್ಥೆ ಡಾ. ಜಯಂತಿ ಭದ್ರಾ, ಸ್ವಾಗತಿಸಿ, ಸಮಾರಂಭದ ಉದ್ದೇಶವನ್ನು ತಿಳಿಸಿದರು. ಮುಖ್ಯ ಅತಿಥಿಯನ್ನು ಗೌರವಿಸುವ ಮೂಲಕ ಅವರನ್ನು ಪರಿಚಯಿಸಲು ಆ್ಯರೆನ್ ಲಾರೆನ್ಸ್ ಡಿ’ಲಿಮಾ ಆವರಣ ರೂಪದಲ್ಲಿ ವಿವರಣೆ ನೀಡಿದರು.


ಮುಖ್ಯ ಅತಿಥಿ ಡಾ. ವಿಷ್ಣು ವಿನೇಕರ್ ಅವರು ಡೇಟಾ ವಿಶ್ಲೇಷಣೆಯು ನೈಜ ಜೀವನದ ಸಮಸ್ಯೆಗಳನ್ನು ಪರಿಹರಿಸಲು ಹೇಗೆ ಸಹಕಾರಿ ಎಂಬುದನ್ನು ವಿವರಿಸಿದರು. ಉತ್ಸಾಹದಿಂದ ಮತ್ತು ಜವಾಬ್ದಾರಿಯುತ ವಾಗಿ ಈ ಕ್ಷೇತ್ರವನ್ನು ಆಳವಾಗಿ ಅರ್ಥಮಾಡಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಅವರು ಸಲಹೆ ನೀಡಿದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಸ್‌ಐಟಿ ನಿರ್ದೇಶಕ ಫಾ. ಡೆನ್ಸಿಲ್ ಅವರು, ಡೇಟಾ ಅನಾಲಿಟಿಕ್ಸ್‌ಗೆ ಪ್ರಸ್ತುತ ಜಗತ್ತಿನಲ್ಲಿ ಇರುವ ಮಹತ್ವವನ್ನು ಪುನರುಚ್ಚರಿಸಿದರು. ವಿದ್ಯಾರ್ಥಿ ನಾಯಕರು ಶಿಸ್ತಿನಿಂದ, ಉನ್ನತ ನೈತಿಕ ಮೌಲ್ಯಗಳೊಂದಿಗೆ ಕಾರ್ಯನಿರ್ವಹಿಸುವಂತೆ ಕರೆ ನೀಡಿದರು. ನಂತರ ಪ್ರೊ. ವೈಸ್ ಚಾನ್ಸಲರ್ ಅವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕರ್ತವ್ಯ ಮತ್ತು ಶೈಕ್ಷಣಿಕ ಜವಾಬ್ದಾರಿಯ ಭಾವನೆ ಇರಬೇಕು ಎಂದರು.


ಹೊಸದಾಗಿ ಆಯ್ಕೆಯಾದ ವಿದ್ಯಾರ್ಥಿ ಕಾರ್ಯದರ್ಶಿಗಳು ತಮ್ಮ ಪದವಿಗೆ ಸಂಬಂಧಿಸಿದ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದಾಗಿ ಪ್ರತಿಜ್ಞೆ ಸ್ವೀಕರಿಸಿದರು. ನಂತರ ಬ್ಯಾಡ್ಜ್ ಪ್ರದಾನ ನಡೆಯಿತು. ಸಿಗ್ಮಾ ಸ್ಕ್ವೇರ್ಡ್ ಅಧ್ಯಕ್ಷ ಅಶ್ವಿನ್ ವಂದಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top