ಆ.1ರಿಂದ 3: ಕೋಟೆಕಾರ್ ಬೀರಿಯಲ್ಲಿ ಮೂರು ದಿನಗಳ ಹಲಸು ಮೇಳ

Upayuktha
0


ಉಳ್ಳಾಲ: ಉಳ್ಳಾಲ ತಾಲೂಕಿನಲ್ಲಿ ಪ್ರಥಮ ಬಾರಿಗೆ ಮೂರು ದಿನಗಳ ಹಲಸು ಹಬ್ಬ ಆ.1 ಶುಕ್ರವಾರ ದಿಂದ ಆ. 3 ಭಾನುವಾರ ವರೆಗೆ ನಡೆಯಲಿದೆ.


ಕೋಟೆಕಾರ್ ಬೀರಿ ಕೆವಿಎಸ್ಎಸ್ ಕನ್ವೆನ್ಶನ್ ಹಾಲ್ ನಲ್ಲಿ ನಡೆಯುವ ಹಲಸು ಮೇಳದಲ್ಲಿ ಆಟಿ ಆಹಾರೋತ್ಸವ, ಕೃಷಿ ಪ್ರೇರಣೆ ಚಟುವಟಿಕೆಗಳಿಗೆ ಚಾಲನೆ ನೀಡಲಾಗುವುದು.


ಕೋಟೆಕಾರ್ ವ್ಯವಸಾಯ ಸೇವಾ ಸಹಕಾರ ಸಂಘದ ವತಿಯಿಂದ ನಡೆಯುವ ಈ ಮೇಳಕ್ಕೆ ಮಾಧ್ಯಮ ಕೇಂದ್ರ ತೊಕ್ಕೊಟ್ಟು ಮತ್ತು ಉಳ್ಳಾಲ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗವಿದೆ.


ಮೇಳದ ವಿಶೇಷ: ಲಾಭದಾಯಕ ಕೃಷಿ ತರಬೇತಿ, ವಿವಿಧ ಸರಕಾರಿ ಇಲಾಖೆಗಳಿಂದ ಮಾಹಿತಿ, ಜೇನು ಕೃಷಿ, ಹಲಸು ಮೌಲ್ಯ ವರ್ಧನೆ ತರಬೇತಿ, ಕೃಷಿಯೆಡೆಗೆ ನಡಿಗೆ ಕಾರ್ಯಕ್ರಮ ಉದ್ಘಾಟನೆ, ಹಡಿಲುಭೂಮಿ ಕೃಷಿ ಚಾಲನೆ, ಕೈತೋಟ ಕ್ರಾಂತಿ ಕಾರ್ಯಕ್ರಮ ಆರಂಭ.


ಸ್ಟಾಲ್‌ಗಳಲ್ಲಿ ಕೆಂಪು ಹಲಸು, ಚಂದ್ರಹಲಸು, ಹಲಸಿನ ಹೋಳಿಗೆ, ಜಿಲೇಬಿ, ಹಪ್ಪಳ, ಚಿಪ್ಸ್, ಹಲಸು ಮಂಚೂರಿ, ಹಲಸಿನ‌ ಗಟ್ಟಿ, ದೋಸೆ, ಹಲಸಿನ ಐಸ್ ಕ್ರೀಂ, ಆಟಿ ಸ್ಪೆಷಲ್ ಪತ್ರೋಡೆ, ಕಣಿಲೆ ಖಾದ್ಯ, ಕೆಸುವಿನ ಖಾದ್ಯ, ತಜಂಕ್ ಪತ್ರೋಡೆ, ಸಾವಯವ ಸಿರಿಧಾನ್ಯ ಉತ್ಪನ್ನಗಳು, ಖಾದಿ‌ ಉತ್ಪನ್ನಗಳು, ಹ್ಯಾಂಡ್ ಮೇಡ್ ವಸ್ತುಗಳು, ತರಕಾರಿ ಮತ್ತು ಹಣ್ಣಿನ ಗಿಡಗಳ ಮಾರಾಟ, ನೈಸರ್ಗಿಕ ಹಣ್ಣಿನ ರಸ, ಪರಿಶುದ್ಧ ಜೇನು, ತಾಜಾ ಕಲ್ಪರಸ.. ಇನ್ನೂ ಹಲವಾರು ನೈಸರ್ಗಿಕ ಉತ್ಪನ್ನಗಳ ಪ್ರದರ್ಶನ, ಸಮಗ್ರ ಮಾಹಿತಿ ಸಿಗಲಿದೆ.


ಹೆಚ್ಚಿನ ಮಾಹಿತಿಗಾಗಿ: 8618140100, 9035318553 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top