ಟೀಟೋಟ್ಲರ್ಸ್- ಅಮಲುರಹಿತ 60 ವರ್ಷಗಳ ಪುಸ್ತಕ- ಆಟೋಬಯೋಗ್ರಫಿ ಬಿಡುಗಡೆ

Upayuktha
0



ಮಂಗಳೂರು:  ಜೀವನಪೂರ್ತಿ ಅಮಲು ಸೇವಿಸದ ಒಬ್ಬರು ತನ್ನ ಮೇಲೆ ಬರುವ ಅಮಿಷಗಳನ್ನು ಸರಿದೂಗಿಸಲು ಪಡುವ ಬವಣೆ ಹೇಗೆ ಎಂದು ಬರೆದ ಈ ಟೀಟೊಟ್ಲರ್ಸ್ ಅಟೋಬಯೋಗ್ರಾಫಿ ಒಂದು ಕಾಲದ ಸರಿಯಾದ ಮಾಹಿತಿ ಆಗಿದೆ ಎಂದು ಮಂಗಳೂರು ಕ್ರೈಸ್ತ ಧರ್ಮದ ಬಿಷಪ್ ಅತೀ ವಂದನೀಯ ಡಾಕ್ಟರೇಟ್ ಪೀಟರ್ ಪಾವ್ಲ್ ಸಲ್ದಾನಾ ನುಡಿದರು.


ಅವರು ಹಿರಿಯ ಪತ್ರಕರ್ತ, ಬಹುಭಾಷಾ ಸಾಹಿತಿ ರೇಮಂಡ್ ಡಿಕೂನಾ ತಾಕೊಡೆ ಅವರ ಜೀವನ ಚರಿತ್ರೆಯ ಪುಸ್ತಕ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.


ಕೃಷಿ ಚಟುವಟಿಕೆ ಮತ್ತು ವ್ಯಾಪಾರ ಇವುಗಳ ಅನುಭವ ಬೆರೆತ ಪತ್ರಕರ್ತ ಒಬ್ಬರು ಸಮಾಜದ ತರಭೇತಿ ಮಾಡಲು ಹೇಗೆ ಸಾಹಿತ್ಯ ಬರೆಯಬಹುದು ಎಂದು ಪುಸ್ತಕ ತೋರಿಸಿದೆ ಎಂದು ಶ್ಲಾಘಿಸಿದರು.


ಮೊದಲಿಗೆ ಮೂಡುಬಿದಿರೆ ಪದ್ಮಶ್ರೀ ಗ್ಯಾಸ್ ಏಜೆನ್ಸಿಯ ಪ್ರಭಂದಕ ಆಲ್ಬರ್ಟ್ ಡಿಅಲ್ಮೇಡಾ ಶುಭಾಶಯ ಕೋರಿದರು.


ರೇಮಂಡ್ ಡಿಕೂನಾ ತಾಕೊಡೆ ಮಾತನಾಡಿ, ಸಾಹಿತಿಗಳು ಮಾತನಾಡುವ ಅಗತ್ಯ ಇಲ್ಲ ಅವರ ಪುಸ್ತಕ ಮಾತನಾಡುತ್ತದೆ. ನಾವೆಲ್ಲರೂ ತೆಂಗಿನ ಮರದಂತೆ. ಅಡ್ಡ ಏನು ಬಂದರೂ ಆಕಾಶದೆಡೆಗೆ ಬೆಳೆಯುವುದು ಬಿಡುವುದಿಲ್ಲ ಮತ್ತು ಫಲ ಕೊಡುವುದು ನಿಲ್ಲಿಸುವುದಿಲ್ಲ ಎಂದರು.


ಕಾರ್ಯಕ್ರಮದಲ್ಲಿ ಐಸಿವೈಎಂ ಮಂಗಳೂರು ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ವಿಜಯ್ ಕಾರ್ಡೋಜಾ, ಮಂಡ್ ಸೋಭಾಣ್ ಅಧ್ಯಕ್ಷ ಲೂವಿಸ್ ಜೆ. ಪಿಂಟೋ, ಸೆಂಟ್ ಆನ್ಸ್ ಪ್ರಯರಿ ಸುಪೀರಿಯರ್ ಫಾ. ಜೆರಾಲ್ಡ್ ಲೋಬೋ, ಕೆಎನ್‌ಎಸ್ ನ ನಿಯೋಜಿತ ಅಧ್ಯಕ್ಷರಾದ ಫಾ. ರೋಕಿ ಡಿಕುನಾ ಮತ್ತು ಕೊಂಕಣಿ ಹಿರಿಯ ಲೇಖಕರು ನವೀನ್ ಕುಲ್ಶೇಕರ್, ಕಾಂಗ್ರೆಸ್ ಮುಖಂಡರೂ ಹಾಗೂ ವಕೀಲರೂ ಆಗಿರುವ ಶಾಲೆಟ್ ಪಿಂಟೋ ಮತ್ತು ಸಾಹಿತಿ ಜೋಸ್ಸಿ ಪಿಂಟೋ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಮೊದಲಿಗೆ ಬಲಿಪೂಜೆಯನ್ನು ಮಾಜಿ ಬಿಷಪರಾದ ಅತೀ ವಂದನೀಯ ಡಾಕ್ಟರೇಟ್ ಅಲೋಶಿಯಸ್ ಪೌಲ್ ಡಿಸೋಜಾರವರು ಸಂಭ್ರಮಿಸಿದರು. ಅವರೊಂದಿಗೆ ಫಾ. ಜೆರಾಲ್ಡ್ ಲೋಬೋ, ಫಾ. ಮ್ಯಾಕ್ಸಿಮ್ ರೊಸಾರಿಯೊ ಮತ್ತು ಫಾ. ಫೆಲಿಕ್ಸ್ ಮೊಂತೆರೋ ಜೊತೆಯಾಗಿ ಪವಿತ್ರ ಆಚರಣೆಯನ್ನು ಸದ್ಭಕ್ತಿಯಿಂದ ನಡೆಸಿದರು.


ರಿಯಾನ ಡಿಕುನಾ ಸ್ವಾಗತಿಸಿದರು ಮತ್ತು ಕಾರ್ಯಕ್ರಮ ನಿರೂಪಿಸಿದರು. ಎಲಿಯಸ್ ಫೆರ್ನಾಂಡಿಸ್ ವಂದಿಸಿದರು.


ನತಾಲಿಯಾ ಡಿಕುನಾ, ಲೋನಾ ವಾಸ್, ಕೆ. ವಸಂತ್ ರಾವ್, ಅಶ್ಲಿನ್, ನಿಹಾನ್, ವಿಲ್ಸನ್, ನೆಲ್ಸನ್, ಅವಿತ್, ವಿನೋಯ್ ಹಾಗೂ ವಿರೋಯ್ ಸಹಕರಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top