ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಬಾಹ್ಯಾಕಾಶ ಶಿಕ್ಷಣದ ರೂಪಾಂತರಾತ್ಮಕ ಹೆಜ್ಜೆ
ಬೆಂಗಳೂರು: InnoNXT ಮೈಂಡ್ಸ್ ಪ್ರೈವೇಟ್ ಲಿಮಿಟೆಡ್ ಸಹಯೋಗದಲ್ಲಿ ನಡೆಯುತ್ತಿರುವ ಆಸ್ಟ್ರೋನೊಮಿ ಎಕ್ಸ್‌ಪೋ 1.0 – ಪ್ರಧಾನ ಸಮ್ಮೇಳನ 2025–26 ಇದರ ಉದ್ಘಾಟನೆಯು ಜುಲೈ 24, 2025 ಗುರುವಾರದಂದು ಐನಾಕ್ಸ್, ಮಂತ್ರಿ ಸ್ಕ್ವೇರ್ ಮಾಲ್, ಮಲ್ಲೇಶ್ವರಂ, ಬೆಂಗಳೂರಿನಲ್ಲಿ ಬೆಳಿಗ್ಗೆ 10:00 ಗಂಟೆಗೆ ನಡೆಯಲಿದೆ.
ಈ ಕಾರ್ಯಕ್ರಮವು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಕಲಿಕೆ, ನಾವೀನ್ಯತೆ, ಸಂವಾದಗಳ ಮೂಲಕ ಬಾಹ್ಯಾಕಾಶ ಶಿಕ್ಷಣವನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯಲು ದಾರಿ ಮಾಡಿಕೊಡಲಿದೆ.
ಆಸ್ಟ್ರೋನೊಮಿ ಎಕ್ಸ್‌ಪೋ 1.0 - ಪ್ರಮುಖ ಆಕರ್ಷಣೆಗಳು:
ಭಾರತದಲ್ಲಿಯೇ ಮೊದಲ ಶೈಕ್ಷಣಿಕ ರಾಕೆಟ್ ಲ್ಯಾಬ್‌ನ ಉದ್ಘಾಟನೆ. ನೂತನ ತಲೆಮಾರಿನ ವಿದ್ಯಾರ್ಥಿ ಬಾಹ್ಯಾಕಾಶ ಕಲಿಕಾ ಅಪ್ಲಿಕೇಶನ್ ಬಿಡುಗಡೆ, ಸಂವೇದಿ ಹಾಗೂ ಅನುಭವಾಧಾರಿತ STEM ಶಿಕ್ಷಣಕ್ಕೆ ಇದು ದಾರಿ ಮಾಡಿಕೊಡಲಿದೆ.
ಡಾಲ್ಬಿ ಅಟ್ಮೋಸ್ ತಂತ್ರಜ್ಞಾನದಲ್ಲಿ ಬಾಹ್ಯಾಕಾಶ ಚಟುವಟಿಕೆಗಳ 3D ಚಿತ್ರ ಪ್ರದರ್ಶನ ನಡೆಯಲಿದೆ. ಇಸ್ರೋ ಮತ್ತು ನಾಸಾ ವಿಜ್ಞಾನಿಗಳೊಂದಿಗೆ ನೇರ ಸಂವಾದ, ವಿದ್ಯಾರ್ಥಿಗಳು ಜಾಗತಿಕ ಬಾಹ್ಯಾಕಾಶ ತಜ್ಞರೊಂದಿಗೆ ಸಂವಾದ ನಡೆಸಲು ಅವಕಾಶವಿದೆ.
150ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಲಿದ್ದಾರೆ ಎಂದು InnoNXT ಮೈಂಡ್ಸ್ ಪ್ರೈವೇಟ್ ಲಿಮಿಟೆಡ್‌ನ ಪ್ರಕಟಣೆ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ