ಮಂಗಳೂರು: ಹಿಂದೂ ಸಂಸ್ಕೃತಿಯಲ್ಲಿ ಪ್ರತಿಯೊಂದು ಹಬ್ಬಗಳ ಆಚರಣೆಗೂ ಹಿನ್ನೆಲೆ ಇದೆ ಅವುಗಳ ಮಹತ್ವ ಅರಿತುಕೊಂಡು ಆಚರಿಸಿದಾಗ ಮಾತ್ರ ಸತ್ವ ಸಿಗುವುದು ಎಂದು ಚಿಂತಕಿ ಪೂರ್ಣಿಮಾ ಪೇಜಾವರ ನುಡಿದರು.
ಅವರು ಗುರುನರಸಿಂಹ ಸಭಾಭವನ ಪಾಂಡೇಶ್ವರ ಇಲ್ಲಿ ಕೂಟ ಮಹಾಜಗತ್ತು ಅಂಗಸಂಸ್ಥೆ ಮಂಗಳೂರು ಮಹಿಳಾ ವಿಭಾಗದಿಂದ ಹಮ್ಮಿಕೊಂಡಿರುವ ಆಟಿಯಲ್ಲಿ ಒಂದು ಆಟ ಕೂಟ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಆಷಾಢ ಮಾಸ ಅತ್ಯಂತ ಮಹತ್ವದ ತಿಂಗಳು ಈ ತಿಂಗಳಿನ ಶುಭ ಕಾರ್ಯಗಳು ಮಾಡಲಾಗುವುದಿಲ್ಲ. ಇದು ಆಧ್ಯಾತ್ಮಿಕ ಚಟುವಟಿಕೆಗಳಿಗೆ ಅದರಲ್ಲೂ ವಿಷ್ಣು ಮತ್ತು ದೇವಿಯ ಆರಾಧನೆಗೆ ಪ್ರಶಸ್ತವಾದ ಸಮಯ ಎಂದರು.
ಶ್ರಾವಣ ಮಾಸದ ವೈಶಿಷ್ಟ್ಯದ ಮಹತ್ವದ ಅರಿವನ್ನು ಪ್ರಸ್ತುತಪಡಿಸಿದರು. ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೂಟ ಮಹಾ ಜಗತ್ತು ಅಂಗ ಸಂಸ್ಥೆಯ ಅಧ್ಯಕ್ಷ ಶ್ರೀಧರ ಹೊಳ್ಳ ಇವರು, ಋಷಿ ಮುನಿಗಳು ನಮಗೆ ಒಂದು ಸುಂದರವಾದ ಜೀವನ ಪದ್ಧತಿಯನ್ನು ಹಾಕಿ ಕೊಟ್ಟಿರುತ್ತಾರೆ. ಪ್ರತಿಯೊಂದು ತಿಂಗಳಿನಲ್ಲೂ ಯಾವ ಯಾವ ಹಬ್ಬಗಳು ಹಮ್ಮಿಕೊಳ್ಳಬೇಕು, ಅವುಗಳಿಂದ ಏನು ಪ್ರಯೋಜನ ಎಂದು ನಮಗೆ ದಾರಿಯನ್ನು ತೋರಿಸಿದ್ದಾರೆ. ಅಲ್ಲದೆ ಶ್ರಾವಣ ಮಾಸವು ನಮ್ಮ ಹಿಂದೂ ಕ್ಯಾಲೆಂಡರ್ ಪ್ರಕಾರ ಐದನೆಯ ತಿಂಗಳು ಆಗಿದ್ದು ಈ ತಿಂಗಳಿನಿಂದಲೇ ಪ್ರಕೃತಿಯ ಆರಾಧನೆ ಗುರುಗಳ ಆರಾಧನೆ ಮುಖಾಂತರ ಹಬ್ಬಗಳು ಪ್ರಾರಂಭವಾಗುವುದು ಎಂದರು.
ದೊಂದು ಅರ್ಥಪೂರ್ಣ ಕಾರ್ಯಕ್ರಮ ಎಂದು ಸಂಘಟಕರನ್ನು ಅಭಿನಂದಿಸಿದರು. ಅಧ್ಯಕ್ಷತೆ ವಹಿಸಿದ್ದ ಲಲಿತಾ ಉಪಾಧ್ಯಾಯ ಸಾಂದರ್ಭಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಪಂಕಜ ಅವರು ಕಾರ್ಯಕ್ರಮ ನಿರೂಪಿಸಿ ವಸಂತ ಲಕ್ಷ್ಮೀ ಸ್ವಾಗತಿಸಿ ಗೌರಿ ಆರ್ ಹೊಳ್ಳ ಧನ್ಯವಾದ ನೀಡಿದರು.
ಧನಲಕ್ಷ್ಮಿ, ಅನುಪಮ, ಪ್ರಫುಲ್ಲ ಶ್ಯಾಮಲ ಉಪಾಧ್ಯಾಯ, ಶಶಿಪ್ರಭಾ ಐತಾಳ್, ಬಾಲಕೃಷ್ಣ ಐತಾಳ್ ಮಂಗಳೂರು ಅಂಗಸಂಸ್ಥೆ ಉಪಾಧ್ಯಕ್ಷ ಪ್ರಭಾಕರ್ ಐತಾಳ್, ಮ್ಯಾನೇಜರ್ ಶಿವರಾಂ ರಾವ್,ಕೋಶಾಧಿಕಾರಿ ಪದ್ಮನಾಭ ಮಯ್ಯ, ಮೊದಲಾದವರು ಉಪಸ್ಥಿತರಿದ್ದರು. ಆಷಾಢದ ವಿಶೇಷವಾದ ತಿಂಡಿ ತಿನಿಸುಗಳ ಸ್ಪರ್ಧೆಯಲ್ಲಿ ಸುಮಾರು 16 ಜನ ಭಾಗವಹಿಸಿದ್ದರು. ಕೊನೆಯಲ್ಲಿ ಪೂರ್ಣಿಮಾ ಪೇಜಾವರ ಇವರನ್ನು ಅಭಿನಂದಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ