ಉಪ್ಪು ಸೊಳೆ ಹಾಕುವ ಕಾರ್ಯಕ್ರಮ
ಅಡ್ಯನಡ್ಕ: ಇಲ್ಲಿನ ಜನತಾ ಪ್ರೌಢಶಾಲೆಯಲ್ಲಿ ಇಕೋ ಕ್ಲಬ್ ವತಿಯಿಂದ ಶಾಲಾ ಬಿಸಿಯೂಟದ ತಯಾರಿಗಾಗಿ ಬಳಸಲು ಉಪ್ಪಿನಲ್ಲಿ ಹಲಸಿನ ಕಾಯಿ ಸೊಳೆಗಳನ್ನು ಸಂರಕ್ಷಿಸಿಡುವ ಕಾರ್ಯ ಜುಲೈ 10ರಂದು ನಡೆಯಿತು.
ಶಾಲೆಯ ತೋಟದಲ್ಲಿ ಬೆಳೆದ ಹಲಸಿನಕಾಯಿಗಳನ್ನು ತರಲಾಗಿತ್ತು. ವಿದ್ಯಾರ್ಥಿಗಳಾದ ದರ್ಶನ್, ಲಿಖಿತ್, ಕೌಶಿಕ್, ಅಭಿಷೇಕ್, ಪ್ರವೀಣ್, ಜನತಾ ಪದವಿಪೂರ್ವ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕಿ ವೀಣಾ ಟಿ, ಶಿಕ್ಷಕರಾದ ರಾಜಗೋಪಾಲ ಜೋಶಿ ಎಸ್. ಅವರೂ ಸಾಕಷ್ಟು ಹಲಸಿನಕಾಯಿಗಳನ್ನು ನೀಡಿದ್ದಾರೆ. ಹಲಸಿನ ಸೊಳೆಗಳನ್ನು ಸರಿಯಾದ ವಿಧಾನದಲ್ಲಿ ಸಂರಕ್ಷಿಸಿಡುವ ಕಾರ್ಯದಲ್ಲಿ ವಿದ್ಯಾರ್ಥಿಗಳೊಂದಿಗೆ ಮುಖ್ಯೋಪಾಧ್ಯಾಯರೂ, ಎಲ್ಲಾ ಶಿಕ್ಷಕ - ಶಿಕ್ಷಕಿಯರು, ಶಾಲಾ ಸಿಬ್ಬಂದಿ ಹಾಗೂ ಬಿಸಿಯೂಟದ ಸಿಬ್ಬಂದಿ ತೊಡಗಿಕೊಂಡಿದ್ದಾರೆ.
ಅಡುಗೆಯಲ್ಲಿ ಪಲ್ಯ, ರುಚಿಯಾದ ಸಾಂಬಾರು ಇತ್ಯಾದಿ ಪದಾರ್ಥಗಳ ತಯಾರಿಗೆ ಇವನ್ನು ಬಳಸಲಾಗುತ್ತದೆ. ಇಕೋ ಕ್ಲಬ್ ಮಾರ್ಗದರ್ಶಕ ಶಿಕ್ಷಕಿ ಕುಸುಮಾವತಿ ಮಾರ್ಗದರ್ಶನ ನೀಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ