ಬೆಳ್ತಂಗಡಿ: ಗುರುವಾಯನಕೆರೆಯ ನಮ್ಮ ಮನೆ ಹವ್ಯಕ ಭವನದಲ್ಲಿ ಭಾನುವಾರ (ಜು. 27) ಗೀತೆ ಜತೆ ಸಾಹಿತ್ಯ ಸಾಂಗತ್ಯ ಒಂದು ವರ್ಷದ ಸಾಹಿತ್ಯ ಪರ್ವ ಉಪನ್ಯಾಸ ಮಾಲಿಕೆಯ ಹತ್ತನೇ ಅಧ್ಯಾಯ ವಿಭೂತಿ ಯೋಗದ ಉಪನ್ಯಾಸವನ್ನು ಲೇಖಕರು, ಅಂಕಣಕಾರರೂ ಆಗಿರುವ ಶಿವಪ್ರಸಾದ್ ಸುರ್ಯ, ಇವರು ನೀಡಿದರು.
ವಾಣಿ ಪದವಿ ಪೂರ್ವ ಕಾಲೇಜು ಬೆಳ್ತಂಗಡಿಯ ಪ್ರಾಂಶುಪಾಲರಾದ ವಿಷ್ಣು ಪ್ರಕಾಶ್ ಎಂ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳು ಶಾರದ ಮಾತೆ ಮತ್ತು ಭಾರತ ಮಾತೆಯ ಭಾವಚಿತ್ರಗಳಿಗೆ ಪುಷ್ಪಾರ್ಚನೆಗೈದರು.
ಶ್ರೀಮತಿ ಆಶಾ ಅಡೂರು ಇವರ ಶಾರದಾ ಸ್ತುತಿಯೊಂದಿಗೆ ಕಾರ್ಯಕ್ರಮವು ಆರಂಭಗೊಂಡಿತು. ಸಮಿತಿಯ ಕಾರ್ಯದರ್ಶಿ ಶ್ರೀಮತಿ ಸುಭಾಷಿಣಿಯವರು ರಚಿಸಿದ ಆಶಯಗೀತೆಯನ್ನು ಶ್ರೀಮತಿ ಅಶ್ವಿಜ ಶ್ರೀಧರ್ ಇವರು ರಾಗ ಸಂಯೋಜಿಸಿ ಸುಶ್ರಾವ್ಯವಾಗಿ ಹಾಡಿದರು. ಶ್ರೀಮತಿ ವಿನುತಾ ರಜತ್ ಗೌಡ ಇವರು ಆಗಮಿಸಿದ್ದ ಸರ್ವರನ್ನು ಸ್ವಾಗತಿಸಿದರು. ಅಭ್ಯಾಗತರನ್ನು ತಾಂಬೂಲ ನೀಡಿ ಸ್ವಾಗತಿಸಲಾಯಿತು.
ಸಂಪನ್ಮೂಲ ವ್ಯಕ್ತಿ ಶ್ರೀ ಶಿವಪ್ರಸಾದ್ ಇವರು ಭಗವದ್ಗೀತೆಯ 10 ನೇ ಅಧ್ಯಾಯ ವಿಭೂತಿ ಯೋಗದ ಬಗ್ಗೆ ವಿವರಿಸುತ್ತಾ.., ಶ್ರೀ ಕೃಷ್ಣನ ದೈವಿಕ ವೈಭವವನ್ನು, ಈ ಬ್ರಹ್ಮಾಂಡದಲ್ಲಿ ಪರಮಾತ್ಮನು ಪ್ರಕಟಗೊಳ್ಳುವ ಅನಂತ ಮಾರ್ಗಗಳನ್ನು, ಅರ್ಜುನನ ಆಶಯದಂತೆ ಅವನಿಗೆ ಶ್ರೀ ಕೃಷ್ಣನು ಪ್ರದರ್ಶಿಸಿದ ತನ್ನ ಐಶ್ವರ್ಯಗಳನ್ನು ವಿವಿಧ ಕಥೆಗಳ ಮೂಲಕ ಮನ ಮುಟ್ಟುವಂತೆ ಉಪನ್ಯಾಸವನ್ನು ನೀಡುವುದರೊಂದಿಗೆ ಈ ಅಧ್ಯಾಯವು ಭಗವಂತನ ಮಹಿಮೆಯನ್ನು ಅರಿತು ಅವನಲ್ಲಿ ಭಕ್ತಿಯನ್ನು ಬೆಳೆಸಿಕೊಳ್ಳಲು ಹೇಗೆ ಪ್ರೇರೇಪಿಸುತ್ತದೆ ಎನ್ನುವುದನ್ನು ಅರ್ಥ ಮಾಡಿಸಿದರು.
ವಿಷ್ಣು ಪ್ರಕಾಶ್ ಇವರು ತಮ್ಮ ಅಧ್ಯಕ್ಷೀಯ ಮಾತಿನಲ್ಲಿ ಸಾಹಿತ್ಯಕ್ಕೆ ಪ್ರಥಮ ಕೊಡುಗೆಯಾದ ಋಗ್ವೇದದ ಬಗ್ಗೆ ಪ್ರಸ್ತಾಪಿಸಿ, ಶ್ರೀ ಕೃಷ್ಣನ ವೈಭವವನ್ನು ಉಲ್ಲೇಖಿಸಿ ಮಾತನಾಡಿದರು. ಅತಿಥಿಗಳನ್ನು ಪುಸ್ತಕ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಶ್ರೀಮತಿ ಮೇಘನಾ ಪ್ರಶಾಂತ್ ಇವರು ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ಸಂತೋಷಿಣಿ ಇವರು ಧನ್ಯವಾದವನ್ನಿತ್ತರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ