ಕೆಎಸ್‌ಆರ್ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ
ಮಂಗಳೂರು: ಕಾಸರಗೋಡು- ಮಂಗಳೂರು ನಡುವಿನ ಹೆದ್ದಾರಿ ಕೆಲಸ ಮುಗಿದೊಡನೆಯೇ ಕಾಸರಗೋಡು- ಮಂಗಳೂರು ನಡುವೆ ಮಿತ ನಿಲುಗಡೆಯ ಬಸ್ ಸೇವೆಯನ್ನು ಕೆ ಎಸ್ ಆರ್ ಟಿ ಸಿ ಆರಂಭಿಸಲಿದೆ ಎಂದು ವರ್ಷದ ಹಿಂದೆ ಭರವಸೆ ಕೊಟ್ಟು, ಕೊಟ್ಟ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಉಭಯ ನಗರಗಳ ನಡುವೆ ರಾಜಹಂಸ ಬಸ್‌ಗಳ ಸೇವೆಯನ್ನು ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (KSRTC) ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ರಾಜೇಶ್ ಶೆಟ್ಟಿಯವರನ್ನು ಕಾಸರಗೋಡು ಮಂಗಳೂರು ಪ್ರಯಾಣಿಕರ ಸಂಘಟನೆಯಾದ ಸಹಯಾತ್ರಿ ತಂಡವು ಶಾಲು ಹೊದೆಸಿ, ಸ್ಮರಣಿಕೆ ನೀಡಿ ಅಭಿನಂದಿಸಿತು.
ಈ ಸಂದರ್ಭದಲ್ಲಿ ಸಹಯಾತ್ರಿ ತಂಡದವರ ಜೊತೆ ಮಾತನಾಡಿದ ರಾಜೇಶ್ ಶೆಟ್ಟಿಯವರು "ಮಂಗಳೂರು ಕಾಸರಗೋಡು ಮಧ್ಯೆ ಈಗಾಗಲೇ 2 ಬಸ್ ಸೇವೆ ಆರಂಭವಾಗಿದ್ದು ಕೂಡಲೇ ಇನ್ನು 2 ಬಸ್ ಆರಂಭಿಸುವುದಾಗಿ ತಿಳಿಸಿದರು. ಶೀಘ್ರದಲ್ಲಿ ಮತ್ತೆರಡು ಬಸ್‌ಗಳು ಕೂಡ ಆರಂಭವಾಗಲಿದ್ದು ಒಟ್ಟು 6 ರಾಜಹಂಸ ಬಸ್‌ಗಳು ಓಡಾಡಲಿವೆ" ಎಂದು ತಿಳಿಸಿದರು.
ಕಾಸರಗೋಡು ಮಂಗಳೂರು ನಡುವೆ ಈಗಾಗಲೇ ಓಡಾಡುವ ರಾಜಹಂಸ ಬಸ್‌ಗೆ ಪ್ರಯಾಣಿಕ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. ಈಗಾಗಲೇ ಸೇವೆ ಆರಂಭಿಸಿರುವ ಬಸ್‌ನ ದರ ಹಾಗೂ ಬಸ್ ನಿಲುಗಡೆ ಕುರಿತು ಸಹಯಾತ್ರಿ ತಂಡದ ಸಲಹೆ ಸೂಚನೆಗಳನ್ನು ಅವರು ಆಲಿಸಿದರು. ಬಸ್ ಸೇವೆಯ ಗುಣಮಟ್ಟವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ನಿರಂತರ ಸಲಹೆ ಸೂಚನೆಗಳನ್ನು ನೀಡುತ್ತಿರುವ ಸಹಯಾತ್ರಿಯ ಕೆಲಸವನ್ನು ಶ್ಲಾಘಿಸಿದ ಅವರು ಮುಂದೆಯೂ ಸಹಯಾತ್ರಿ ತಂಡದವರು ಸಲಹೆ ಸೂಚನೆಗಳನ್ನು ಮುಂದುವರಿಸಬೇಕೆಂದು ವಿನಂತಿಸಿದರು.
ಸಹಯಾತ್ರಿ ತಂಡವನ್ನು ಕಿಶೋರ್ ಏನಂಕೂಡ್ಲು, ಲೋಕೇಶ್ ಜೋಡುಕಲ್ಲು ಹಾಗೂ ಶಿವಕೃಷ್ಣ ನಿಡುವಜೆ ಪ್ರತಿನಿಧಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ