ಬೆಂಗಳೂರು: ಮಲ್ಲೇಶ್ವರದ ಜಗನ್ನಾಥ ಬಳಗದಲ್ಲಿ ಕಿಕ್ಕಿರಿದ ಪ್ರೇಕ್ಷಕರ ಮಧ್ಯೆ ಡಾ. ಲೀಲಾಬಸವರಾಜು ಅವರ "ಅವ್ವರಸಿ" ಏಕವ್ಯಕ್ತಿ ಅಭಿನಯದ 10ನೇ ಪ್ರದರ್ಶನ ನಡೆಯಿತು.
ಇಂದಿನ ಅವರ ಏಕವ್ಯಕ್ತಿ ಅಭಿನಯ ಚಾತುರ್ಯ ಸಾಕಷ್ಟು ಪ್ರೌಢಿಮೆಯಿಂದ ಮೂಡಿಬಂದು ನೆರೆದಿದ್ದ ಪ್ರೇಕ್ಷಕರ ಮನಸೆಳೆದು ಪೂರ್ಣ ನಾಟಕವನ್ನು ವಿಸ್ಮಿತರಾಗಿ ನೋಡುವಂತೆ ಮಾಡಿದ್ದು ವಿಶೇಷ.
ಡಾ. ಲೀಲಾಬಸವರಾಜು ಅವರು ಈ ನಾಟಕದಲ್ಲಿ ರಾಜಮಾತೆ ಭೈರಾದೇವಿ, ಗುರುಗಳಾದ ವರ್ಧಮಾನ ಸಿದ್ಧಾಂತಿ, ಗಿರಿಜಕ್ಕ, ಪುಟಾಣಿ ಗೌರಿ, ಬೀರಪ್ಪ, ವರ್ತಕ, ರಾಣಿ ಚೆನ್ನಭೈರಾದೇವಿ, ಶಬಲೆ ಹೀಗೆ ಹಲವಾರು ಪಾತ್ರಗಳನ್ನು ಆ ಪಾತ್ರಕ್ಕೆ ತಕ್ಕಂತಹ ಧ್ವನಿ ಬದಲಾವಣೆ, ನಡೆಯಲ್ಲಿನ ಗತ್ತು ಎಲ್ಲವೂ ಅದ್ಭುತವಾಗಿ ಮೂಡಿಬಂದು ಪ್ರೇಕ್ಷಕರನ್ನು ಅಚ್ಚರಿ ಗೊಳಿಸಿತು.
ಇತಿಹಾಸ, ರಾಜಪರಂಪರೆ, ಬದುಕೆಂದರೆ ಅಲೆಯೊಂದು ಬಂದು ಹೆಜ್ಜೆಯ ಗುರುತೆಲ್ಲವನ್ನೂ ಅಳಿಸಿಹೋಗುವ ತೆರದಿ ಸಂಭಾಷಣೆ ಎಲ್ಲರ ಮನಮುಟ್ಟಿ ಪ್ರೇಕ್ಷಕರ ಕಣ್ಣುತುಂಬಿ ರಾಣಿಯಲ್ಲಿದ್ದ ಮಾತೃಹೃದಯವನ್ನು ಮೆರೆಸಿದೆ.
ಎಂದಿನಂತೆ ಮೈಕಾಸುರನ ಹಾವಳಿ, ವೇದಿಕೆಯ ಸ್ಥಳಾಭಾವ ಆದರೂ ಕಲಾವಿದೆ ವಿಚಲಿತರಾಗದೆ ಅಭಿನಯಿಸಿದ್ದು ಅವರ ಕಲಾಸಾಧನೆಗೆ ಕನ್ನಡಿಯಾಗಿದೆ.
ಡಾ. ಲೀಲಾಬಸವರಾಜು ಅವರ ಈ ಏಕವ್ಯಕ್ತಿ ಅಭಿನಯ ನೂರು ಪ್ರದರ್ಶನ ಕಂಡು ಕನ್ನಡ ಜನತೆಯ ಮನದಲ್ಲಿ ಚಿರಸ್ಥಾಯಿಯಾಗಿ ನಿಂತು ಕಳೆದು ಹೋಗಿರುವ ಕರಿಮೆಣಸಿನ ರಾಣಿ ಚೆನ್ನಭೈರಾದೇವಿಯನ್ನು ನೆನೆಯುವಂತಾಗಲಿ ಎಂದು ಆಶಿಸೋಣ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ