ಧರ್ಮತ್ತಡ್ಕ: ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Upayuktha
0


ಧರ್ಮತ್ತಡ್ಕ: ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆ, ಧರ್ಮತ್ತಡ್ಕದಲ್ಲಿ 2025–26ನೇ ಸಾಲಿನ ಅಂತಾರಾಷ್ಟ್ರೀಯ ಯೋಗ ದಿನಾಚರಣೆ  ಸಂಭ್ರಮದಿಂದ ಆಚರಿಸಲಾಯಿತು. ಯೋಗವೇ ಪ್ರಾಚೀನ ಭಾರತೀಯ ಪರಂಪರೆ, ಜೀವನ ಶೈಲಿಯ ಅನಿವಾರ್ಯ ಅಂಗ ಎಂಬ ಸಾರವನ್ನು ಈ ಕಾರ್ಯಕ್ರಮ ಧ್ವನಿಸಿತು.


ಸದಾಶಿವ ಕಡಂಬಾರ್ ಅವರು ಯೋಗ ಪ್ರಾತ್ಯಕ್ಷಿಕೆಯ ಮುಖ್ಯ ಅತಿಥಿಯಾಗಿ ಆಗಮಿಸಿ ಯೋಗದ ಅಗಾಧ ಮಹತ್ವವನ್ನು ವಿವರಿಸಿ "ಯೋಗವು ದೇಹ-ಮನಸ್ಸಿಗೆ ಸಮತೋಲನ ನೀಡುವ ಶ್ರೇಷ್ಠ ಸಾಧನೆ. ನಿತ್ಯ ಯೋಗಾಭ್ಯಾಸ ಮಾಡುವವನು ಆರೋಗ್ಯವಂತನಾಗುತ್ತಾನೆ, ನೆಮ್ಮದಿಯನ್ನು ಪಡೆಯುತ್ತಾನೆ" ಎಂದರು.


ಈ ಸಂದರ್ಭದಲ್ಲಿ ಶಾಲೆಯ ವ್ಯವಸ್ಥಾಪಕ  ಎನ್. ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, "ಯೋಗವು ಜಗತ್ತಿಗೆ ಭಾರತದ ಅಮೂಲ್ಯ ಕೊಡುಗೆ. ಇದು ಶಾರೀರಿಕ ಆರೋಗ್ಯಕ್ಕಷ್ಟೇ ಅಲ್ಲದೆ ಮಾನಸಿಕ ಶಕ್ತಿ ಮತ್ತು ತಾತ್ವಿಕ ತತ್ತ್ವಗಳ ಒಗ್ಗಟ್ಟನ್ನೂ ಸಾರುತ್ತದೆ" ಎಂದು ಹೇಳಿದರು.


ಪ್ರಭಾರ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಗಂಗಮ್ಮ ಅವರು ಶುಭ ನುಡಿಗಳನ್ನು ಹೇಳಿದರು. ದೈಹಿಕ ಶಿಕ್ಷಕ ಸಂತೋಷ್ ಎಂ ಅವರು  ಶುಭಾಶಯಗಳನ್ನು ವ್ಯಕ್ತಪಡಿಸಿದರು.


ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು. ವಿಚೇತ ಕೆ ಅವರು ಸ್ವಾಗತಿಸಿದರು, ಶಿವನಾರಾಯಣ ಭಟ್ ನಿರೂಪಣೆ ಮಾಡಿದರು. ಸೌಮ್ಯ ಎಂ ವಂದಿಸಿದರು.


ಶಾರೀರಿಕ-ಮಾನಸಿಕ ಸಮತೋಲನದ ಸಂದೇಶದೊಡನೆ, ಸದಾಶಿವ ಕಡಂಬಾರ್ ಅವರು ವಿದ್ಯಾರ್ಥಿಗಳಿಗೆ ವಿವಿಧ ಯೋಗಾಸನಗಳ ಪ್ರಾತ್ಯಕ್ಷಿಕೆ ನೀಡಿದರು. ಮಕ್ಕಳೂ ಸಕ್ರಿಯವಾಗಿ ಪಾಲ್ಗೊಂಡು ಯೋಗದ ಮೌಲ್ಯವನ್ನು ತಿಳಿದುಕೊಂಡರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top