ಮೂಡುಬಿದ್ರೆ: ಹೋಲಿ ರೋಸರಿ ಪದವಿಪೂರ್ವ ಕಾಲೇಜು ಮೂಡಬಿದ್ರಿ, ಇಲ್ಲಿ 11 ನೆಯ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ನಡೆಸಲಾಯಿತು. ಖ್ಯಾತ ಯೋಗ ತರಬೇತಿದಾರ ಶಂಕರ್ ನಾಯಕ್ ಇವರು ಕಾರ್ಯಕ್ರಮ ಉದ್ಘಾಟಿಸಿದರು.
ಜನರಿಗೆ ಬರುವ ಕಾಯಿಲೆಗಳನ್ನು ನಿಯಂತ್ರಿಸಲು ಯೋಗ, ಸರಿಯಾದ ಜೀವನಕ್ರಮ, ಆಹಾರ ಶೈಲಿ ಹೇಗೆ ಸಹಕಾರಿ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿ ಕೊಟ್ಟರು. ಜೊತೆಗೆ ಧ್ಯಾನ, ಪ್ರಾಣಾಯಾಮ ಹಾಗೂ ಯೋಗಾಸನಗಳ ತರಬೇತಿ ನೀಡಿದರು.
ಪ್ರಾಂಶುಪಾಲೆ ಶ್ರೀಮತಿ ರಮಾ ಇವರು ಮಾತನಾಡಿ, ಯೋಗದ ಮಹತ್ವ ಅರಿತು ಸೂಕ್ತವಾದ ತರಬೇತುದಾರರ ಸಹಾಯಕ ಪಡೆದು ದೈಹಿಕ ಸ್ವಾಸ್ತ್ಯ, ಮನೋನಿಗ್ರಹ ಹೆಚ್ಚಿಸಿ ಉತ್ತಮ ಭವಿಷ್ಯ ರೂಪಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕನ್ನಡ ಉಪನ್ಯಾಸಕಿ ಶ್ರೀಮತಿ ಶ್ವೇತಾ ಕಾರ್ಯಕ್ರಮ ನಿರೂಪಿಸಿದರು. ಅರ್ಥಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಜೋಯ್ಲಿನ್ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಸಮಾಜಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಸೀಮಾ ಡಿಸೋಜಾ ಇವರು ಧನ್ಯವಾದ ಸಮರ್ಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ