ಮಹಿಳಾ ಯಕ್ಷಕಲಾವಿದರು ಈಗ ಪ್ರಸ್ತುತ: ಆರೂರು ಆಶಾ ಪ್ರಭಾಕರ ರಾವ್

Upayuktha
0


ಮಂಗಳೂರು: "ಇಂದು ಯಕ್ಷಗಾನ ರಂಗ ವಿಸ್ತರಿಸಲ್ಪಟ್ಟಿದೆ. ಪುರುಷರಂತೆಯೇ ಮಹಿಳಾ ಕಲಾವಿದರೂ ತಮ್ಮ ನೈಪುಣ್ಯತೆಯನ್ನು ಪ್ರದರ್ಶಿಸುತ್ತಿದ್ದಾರೆ. ದೇಶವಿದೇಶಗಳಿಗೂ ತಮ್ಮ ಕಲಾ ಪ್ರದರ್ಶನವನ್ನು ವಿಸ್ತರಿಸಿದ್ದಾರೆ. ಅನೇಕರು ಮೇಳದ ಕಲಾವಿದರಿಗೆ ಸಮದಂಡಿಯಾಗಿ ನಿಲ್ಲುವಂತೆ ಪ್ರಬುದ್ಧರಾಗುತ್ತಿದ್ದಾರೆ. ಇಂದು ಸರಯೂವಿನಿಂದ ಸನ್ಮಾನಗೊಳ್ಳುತ್ತಿರುವ ಸಂಧಾ ರಾವ್ ಕೂಡಾ ಓರ್ವ ಸಂಘಟಕಿ, ಯಕ್ಷಕಲಾವಿದೆ, ಉತ್ತಮ ವಾಗ್ಮಿಯೂ ಆಗಿದ್ದಾರೆ. ಈ ಪುಣ್ಯಕ್ಷೇತ್ರದಲ್ಲಿ ಗೌರವಿಸಲ್ಪಡುವುದು ಅವರ ಭಾಗ್ಯ" ಎಂದು ಆರೂರು ಆಶಾ ಪ್ರಭಾಕರ ರಾವ್ ಹೇಳಿದರು.


ಅವರು ಮಕ್ಕಳ ಮೇಳದ ಬೆಳ್ಳಿಹಬ್ಬದ ಆಚರಣೆಯ ಸಂದರ್ಭದಲ್ಲಿ ಕದ್ರಿಯಲ್ಲಿ ನಡೆಯುತ್ತಿರುವ ಬಯಲಾಟ ಸರಣಿಯಲ್ಲಿಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ ತುಳುಕೂಟ (ರಿ) ಸಂಸ್ಥೆಯ ಅಧ್ಯಕ್ಷೆ ಹೇಮಾ ದಾಮೋದರ ನಿಸರ್ಗರವರು ರಜತ ಸಂಭ್ರಮದಲ್ಲಿರುವ ಮಕ್ಕಳ ಮೇಳದ ಕಾರ್ಯಚಟುವಟಿಕೆಗಳ ಬಗ್ಗೆ ಶ್ಲಾಘಿಸಿದರು.


ಕದ್ರಿ ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಅಡಿಗರು ಶುಭಾಶಂಸನೆಗೈದರು. ಸನ್ಮಾನಿತೆ ಸುಧಾ ವಿ. ರಾವ್ ಧನ್ಯತೆ ವ್ಯಕ್ತಪಡಿಸಿದರು.ಗೌರವ್ ರಾವ್ ಸನ್ಮಾನ ಪತ್ರ ವಾಚಿಸಿದರು. ಶೋಭಾ ಪೇಜಾವರ್ ನಿರ್ವಹಿಸಿದರು.


ನಾಗಕನ್ನಿಕಾ ದೇವಳದ ಪ್ರಬಂಧಕ ಯೋಗೀಶ್ ಕುಮಾರ್, ಅನುಪಮಾ ಅಡಿಗ, ಸುಧಾಕರ್ ರಾವ್ ಪೇಜಾವರ, ವೃಷಭ್‌ ಶೆಟ್ಟಿ, ಗೌತಮ, ನಿತ್ಯಶ್ರೀ ದೃಶಾಲ್ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top