ಸಮಷ್ಠಿಯ ಹಿತ ಬಯಸುವವನೇ ಬ್ರಾಹ್ಮಣ: ಅಲೆವೂರಾಯ

Upayuktha
0


ಮಂಗಳೂರು: "ಈ ರಾಷ್ಟ್ರದ ಹಿತಾಸಕ್ತಿಯನ್ನು ಕಾಪಾಡುತ್ತಾ ಸಮಷ್ಠಿಯನ್ನು ಸಮದೃಷ್ಠಿಯಿಂದ ನೋಡುತ್ತಾ ಸಾಗುವವನೇ ಬ್ರಾಹ್ಮಣ. ಪುರದ ಹಿತ ಬಯಸುತ್ತಾ ಪುರ ಹಿತಕ್ಕಾಗಿ ಅನುಷ್ಠಾನಗಳನ್ನು ತಾನು ಮಾಡುತ್ತಾ ಸಮಾಜದ ಪ್ರಮುಖ ಭಾಗವಾಗಿ ಲೋಕದ ಲೋಗರಿಗಾಗಿ ಬದುಕುತ್ತಾನೆ. ಒಗ್ಗಟ್ಟಿನಿಂದ ಸಾಗಿ ವೇದಶಾಸ್ತ್ರಗಳನ್ನು ಅಭ್ಯಸಿಸಿ ಜಗತ್ತಿಗೆ ತಿಳಿಸುತ್ತಾನೆ ಅಧ್ಯಯನ- ಅಧ್ಯಾಪನಾ ಶಕ್ತಿ ಬ್ರಾಹ್ಮಣ್ಯಕ್ಕಿದೆ" ಎಂದು ಕೋಡಿಕಲ್‌ನ ವಿಪ್ರ ವೇದಿಕೆಯ ದಶಮ ಸಂಭ್ರಮ ಸರಣಿಯ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷೀಯ ನುಡಿಗಳನ್ನು ಆಡಿದರು.


ವೇ|| ಮೂ|| ವಿಶ್ವ ಕುಮಾರ ಜೋಯಿಸರು ಸತ್ಯನಾರಾಯಣ ವ್ರತದ ಕಥಾವಾಚನ ಮಾಡಿ ಪೂಜೆ ನಡೆಸಿಕೊಟ್ಟರು. ಹಿರಿಯ ನ್ಯಾಯವಾದಿ ವೇದಿಕೆಯ ಗೌರವಾಧ್ಯಕ್ಷ ಜಯರಾಮ ಪದಕಣ್ಣಾಯ, ಉಪಾಧ್ಯಕ್ಷ ತೆಕ್ಕೆಕೆರೆ ವಿಶ್ವೇಶ್ವರ ಭಟ್, ಗಿರೀಶ್ ರಾವ್, ಅನೂಪ್ ರಾವ್ ಬಾಗ್ಲೋಡಿ, ವಿದ್ಯಾ ಗಣೇಶ್ ರಾವ್ ವೇದಿಕೆಯಲ್ಲಿದ್ದರು.


ಪ್ರಧಾನ ಕಾರ್ಯದರ್ಶಿ ದುರ್ಗಾದಾಸ್ ಕಟೀಲ್ ಸ್ವಾಗತಿಸಿದರು. ಖಚಾಂಚಿ ಕಿಶೋರ್ ಕೃಷ್ಣ ವಂದಿಸಿದರು. ಸುಧೀಂದ್ರರವರ ನೇತೃತ್ವದಲ್ಲಿ ವಿಷ್ಣು ಸಹಸ್ರನಾಮವನ್ನು ಸಾಮೂಹಿಕವಾಗಿ ವಾಚಿಸಲಾಯಿತು. ವೇದಿಕೆಯ ಅಧ್ಯಕ್ಷ ವರ್ಕಾಡಿ ರವಿ ಅಲೆವೂರಾಯ ಅಧ್ಯಕ್ಷೀಯ ನುಡಿಗಳನ್ನಾಡಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top