ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವತಿಯಿಂದ ಕಾಲೇಜು ಬಸ್ಸುಗಳಿಗೆ ಚಾಲನೆ

Chandrashekhara Kulamarva
0

 


ಪುತ್ತೂರು: ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವತಿಯಿಂದ ಕಾರ್ಯನಿರ್ವಹಿಸುವ ಕಾಲೇಜಿನ ಬಸ್ಸುಗಳಿಗೆ ಸೋಮವಾರದದು ಚಾಲನೆ ನೀಡಲಾಯಿತು.


ಕಾಟುಕುಕ್ಕೆ ಹಾಗೂ ಪಾಣಾಜೆ ಮಾರ್ಗವಾಗಿ ಸಂಚರಿಸುವ ಕಾಲೇಜಿನ ಬಸ್ಸಿಗೆ ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ಜಯರಾಮ ರೈ ಡಿ ಇವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಯೋಗಿ ಫುಡ್ ಪ್ರಾಡಕ್ಟ್ ಇದರ ಮಾಲಕರಾದ ಯೋಗೀಶ್  ಖಂಡೇರಿ, ಕಾಲೇಜಿನ ಶೈಕ್ಷಣಿಕ ಸಂಯೋಜಕರಾದ ಶ್ರೀವತ್ಸ ಎನ್ ಹಾಗೂ ಸ್ಥಳೀಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಅದೇ ರೀತಿ ಕೌಡಿಚ್ಚಾರ್ ಮಾರ್ಗವಾಗಿ ಸಂಚರಿಸುವ ಕಾಲೇಜು ಬಸ್ಸಿನ ಉದ್ಘಾಟನೆಯನ್ನು ನನ್ಯ  ಅಚ್ಚುತ ಮೂಡಿತ್ತಾಯ ಇವರು ನೆರವೇರಿಸಿಕೊಟ್ಟರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಎಂ. ದೇವಿಚರಣ್ ರೈ ಹಾಗೂ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು. ಈ ಬಸ್ಸಿನ ಸದುಪಯೋಗವನ್ನು ವಿವೇಕಾನಂದ ವಿವಿಧ ಸಂಸ್ಥೆಗಳ ಆಧ್ಯಾಪಕರು ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಪಡೆದು ಕೊಳ್ಳಲಿದ್ದಾರೆ.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top