ಆಶುಕವಿ ನಾರಾಯಣ ಭಟ್ ಅವರಿಗೆ ನುಡಿ ನಮನ

Upayuktha
0


ಕಾಸರಗೋಡು: ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ಶತ ಸಂಭ್ರಮ ಹಾಗೂ ಪೊಟ್ಟಿಪ್ಪಲ ಆಶುಕವಿ ಕೀರ್ತಿಶೇಷ ನಾರಾಯಣ ಭಟ್ ಅವರಿಗೆ ನುಡಿ ನಮನ ಕಾರ್ಯಕ್ರಮ ಜೂನ್ 8ರಂದು ಭಾನುವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು.


ಮಧುಲತಾ ಪ್ರಾರ್ಥನೆ ಮಾಡಿದರು. ಉದ್ಘಾಟನೆಯನ್ನು ಉಮೇಶ್ ನಾಯಕ್ ಅವರು ನೆರವೇರಿಸಿದರು. ದೀಪ ಪ್ರಜ್ವಲನೆಯನ್ನು ಈಶ್ವರ ಭಟ್  ಮಾಡಿದರು. ಪ್ರಾಸ್ತಾವಿಕ ನುಡಿಯನ್ನು ಮನು ಕುಮಾರ್ ನುಡಿದರು. ಡಾ. ವಾಣಿಶ್ರೀ ಎಲ್ಲರನ್ನು ಸ್ವಾಗತಿಸಿದರು. ನುಡಿ ನಮನ ಪ್ರಸಾದ್ ಪೆರ್ಲ ಅವರಿಂದ ನೆರವೇರಿತು. ಡಾ. ಗಿರೀಶ್ ಅವರು ಸಭಾಧ್ಯಕ್ಷತೆ ವಹಿಸಿದ್ದರು.


ಮುಖ್ಯ ಅತಿಥಿಗಳಾಗಿ ಡಾ. ಶಾಂತಾ ಪುತ್ತೂರು ರಾಣಿ ಪುಷ್ಪಲತಾದೇವಿ ಜಯಾನಂದ ಪೆರಾಜೆ, ಗಂಗಾಧರ ಗಾಂಧಿ, ಪ್ರೇಮಲತಾ ರಾವ್ ಭಾಗವಹಿಸಿದ್ದರು. ಅಚ್ಚುತ ಭಟ್ ಧನ್ಯವಾದ ಸಮರ್ಪಣೆ ಮಾಡಿದರು.


ಡಾ. ಸುರೇಶ್ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಡಾ. ಜಯಪ್ರಕಾಶ್ ನಾರಾಯಣ, ನಾರಾಯಣ ರೈ ಕುಕ್ಕುವಳ್ಳಿ ವಿನಯ್ ಸುವರ್ಣ, ವಿಜಯ್ ಕುಮಾರ್, ಈಶ್ವರ್ ಭಟ್ ಸಂಪತ್ತಿಲ, ಕೃಷ್ಣಮೂರ್ತಿ, ಸತ್ಯಶೀಲಾ, ಪಾರ್ವತಿ, ಕಿಶೋರ್ ಕುಮಾರ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.


ಡಾ. ಲಕ್ಷ್ಮಣಮೂರ್ತಿ ಅವರ ರಾಣಿ ಅಬ್ಬಕ್ಕ ಜೊತೆ ಪಯಣ ಪುಸ್ತಕ ಬಿಡುಗಡೆ ಮಾಡಲಾಯಿತು. ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ಕಲಾವಿದರಿಂದ ವೈವಿಧ್ಯಮಯ ಸಾಹಿತ್ಯ ಗಾನ ನೃತ್ಯ ಕಾರ್ಯಕ್ರಮ ನೆರವೇರಿತು. ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪೊಟ್ಟಿಪ್ಪಲ ಕೀರ್ತಿಶೇಷ ಅಶುಕವಿ ನಾರಾಯಣ ಭಟ್ ಪ್ರಶಸ್ತಿಯನ್ನು ಡಾ. ಶಾಂತಾ ಪುತ್ತೂರು, ಜಯಾನಂದ ಪೆರಾಜೆ, ಗಂಗಾಧರ ಗಾಂಧಿ, ರಾಣಿ ಪುಷ್ಪಲತಾದೇವಿ ಇವರಿಗೆ ನೀಡಿ ಗೌರವಿಸಲಾಯಿತು. ರಾಜಶೇಖರ್ ದಾವಣಗೆರೆ ಕಾರ್ಯಕ್ರಮದ ನಿರೂಪಣೆ ಮಾಡಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top