ಹಿಂದೂಗಳ ಸಂಘಟಿತ ಕಾನೂನು ಹೋರಾಟ ದಿನದಿನಕ್ಕೆ ವೇಗ: ಹಿಂದೂ ರಾಷ್ಟ್ರ ಸಮನ್ವಯ ಸಮಿತಿ

Upayuktha
0



ಬೆಂಗಳೂರು : ಅಬ್ದುಲ್ ರೆಹಮಾನ್ ಇವರ ಹತ್ಯೆಯ ನಂತರ, ತನಿಖೆಯ ಹೆಸರಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು, ಅಮಾಯಕ ಹಿಂದೂಗಳ ಮನೆಗಳಿಗೆ ರಾತೋರಾತ್ರಿ ಹೋಗಿ ಕಿರುಕುಳ ನೀಡಿದ್ದರು. ಈ ಪ್ರಕರಣದ ವಿರುದ್ಧ ಸಮಸ್ತ ಹಿಂದೂ ಸಂಘಟನೆಗಳ ವತಿಯಿಂದ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯು ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿತ್ತು. ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಟಿ. ಶಾಮ್ ಭಟ್ ಇವರು ಈ ಪ್ರಕರಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಗಳಿಗೆ ನೊಟೀಸ್ ಹೊರಡಿಸಿದರು. ಮತ್ತು ವಿಚಾರಣೆಯ ವರದಿಯನ್ನು ಜುಲೈ 22 ಗೆ ಆಯೋಗಕ್ಕೆ ಸಲ್ಲಿಸಬೇಕೆಂದು ಆದೇಶಿಸಿದ್ದಾರೆ.


ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಸ್ತ ಹಿಂದೂ ಸಂಘಟನೆಗಳು ಒಟ್ಟಾಗಿ ರಾಜ್ಯವ್ಯಾಪಿ ಕಾನೂನು ಹೋರಾಟ ಪ್ರಾರಂಭಿಸಿದ್ದರು. ಜೂನ್ 4, 2025 ರಂದು ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಬೆಂಗಳೂರಿನ ಮಾನವ ಹಕ್ಕು ಆಯೋಗದ ಅಧ್ಯಕ್ಷರಾದ ಟಿ. ಶ್ಯಾಮ್ ಭಟ್ ಇವರಿಗೆ ದೂರು ನೀಡಲಾಗಿತ್ತು. ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಮೋಹನ ಗೌಡ, ಕರ್ನಾಟಕ ಉಚ್ಛ ನ್ಯಾಯಾಲಯದ ಹಿರಿಯ ವಕೀಲರಾದ ನ್ಯಾಯವಾದಿ ಅಮೃತೇಶ್ ಎನ್ ಪಿ ಸೇರಿದಂತೆ ಅನೇಕ ವಕೀಲರು ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು. 


ಅಷ್ಟೇ ಅಲ್ಲದೇ ಎಲ್ಲ ಹಿಂದೂ ಸಂಘಟನೆಗಳು ಸೇರಿ ಈ ವಿಷಯವಾಗಿ ರಾಜ್ಯದ ವಿಜಯಪುರ, ಹುಬ್ಬಳ್ಳಿ, ಕಾರವಾರ, ಶಿವಮೊಗ್ಗ, ಹಾಸನ, ಉಡುಪಿ ಮತ್ತು ಮಂಗಳೂರಿನಲ್ಲಿ ಸಹ ಅಲ್ಲಿನ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ರಾಜ್ಯಪಾಲರಿಗೆ ಪೊಲೀಸರ ಈ ತಾರತಮ್ಯದ ಕೃತ್ಯ ಕೂಡಲೇ ನಿಲ್ಲಬೇಕೆಂದು ಮನವಿ ಮಾಡಲಾಗಿತ್ತು.


ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯು ಸಲ್ಲಿಸಿದ್ದ ಈ ಮನವಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸೌಹಾರ್ದ ಸ್ಥಾಪಿಸುವ ಹೆಸರಿನಲ್ಲಿ ಪೊಲೀಸರು ರಾತೋರಾತ್ರಿ ಅಮಾಯಕರಿಗೆ ಫೋನ್ ಕಾಲ್ ಮಾಡಿ ಠಾಣೆಗೆ ಕರೆಯುವುದು, ಹಿಂದೂಗಳ ಮನೆಗಳಿಗೆ ತೆರಳುವುದು,  ಅವರ ಫೋಟೋ ತೆಗೆಯುವುದು, ಮನೆಯ ಜಿಪಿಎಸ್ ಮಾಹಿತಿ ಸಂಗ್ರಹಿಸುವುದು, ಹೀಗೆ ಅಮಾಯಕರು ಮತ್ತು ವಯಸ್ಕರು ಎಂದು ಲೆಕ್ಕಿಸದೆ ಕೇವಲ ಹಿಂದೂಗಳನ್ನು ಗುರಿಯಾಗಿಸಿ ಅವರೊಂದಿಗೆ ಕಾನೂನು ಬಾಹಿರವಾಗಿ ವರ್ತಿಸಿ ಮಾನಸಿಕ ಹಿಂಸೆ ನೀಡಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿತ್ತು.


-ಶರತ್ ಕುಮಾರ್, 

ಹಿಂದೂ ರಾಷ್ಟ್ರ ಸಮನ್ವಯ ಸಮಿತಿ,



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top