ಎಸ್‌ಸಿಐ ಬಂಟ್ವಾಳ ಅಧ್ಯಕ್ಷರಾಗಿ ತಾರಾನಾಥ ಕೊಟ್ಟಾರಿ ಆಯ್ಕೆ; ಜು.29ರಂದು ಪದಗ್ರಹಣ

Upayuktha
0


ಬಂಟ್ವಾಳ: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಅಂತಾರಾಷ್ಟ್ರೀಯ ಸಂಸ್ಥೆಯ ಬಂಟ್ವಾಳ ನೇತ್ರಾವತಿ ಸಂಗಮ ಘಟಕದ ಅಧ್ಯಕ್ಷರಾಗಿ ತೇವು ತಾರಾನಾಥ ಕೊಟ್ಟಾರಿ ಆಯ್ಕೆ ಯಾಗಿದ್ದಾರೆ.


ಹಿರಿಯ ಜೇಸಿಗಳಾದ ಪಿ. ಮಹಮ್ಮದ್ ಆಡಳಿತ, ಸಂದೀಪ್ ಸಾಲ್ಯಾನ್ ಸಾರ್ವಜನಿಕ ಸಂಪರ್ಕ, ಮಹೇಶ ನಿಟಿಲಾಪುರ ತರಬೇತಿ ವಿಭಾಗದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.


ಕಾರ್ಯದರ್ಶಿಯಾಗಿ ನ್ಯಾಯವಾದಿ ಶೈಲಜಾ ರಾಜೇಶ್, ಜೊತೆ ಕಾರ್ಯದರ್ಶಿಯಾಗಿ ಯೋಗೀಶ ಬಂಗೇರ ನೇಮಕವಾಗಿದ್ದಾರೆ. ನಿರ್ದೇಶಕರಾಗಿ ಸ್ಥಾಪಕ ಅಧ್ಯಕ್ಷ ಜಯಾನಂದ ಪೆರಾಜೆ, ಮಾಜಿ ಅಧ್ಯಕ್ಷ ಡಾ.ಆನಂದ ಬಂಜನ್ ನಿಯುಕ್ತಿಗೊಂಡಿದ್ದಾರೆ. 14 ಮಂದಿ ವಿವಿಧ ಪದಾಧಿಕಾರಿಗಳಾಗಿರುತ್ತಾರೆ ಎಂದು ಅಧ್ಯಕ್ಷ ಕೆ. ಆದಿರಾಜ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಪದಗ್ರಹಣ ಸಮಾರಂಭವು ಜು.29 ರಂದು ಬೆಳಿಗ್ಗೆ 10 ಗಂಟೆಗೆ ಬಿಸಿರೋಡಿನ ಅಕ್ಷಯ ಸಭಾಭವನದಲ್ಲಿ ನಡೆಯಲಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top