ಟಾಟಾ ಅಸೆಟ್ ಮ್ಯಾನೇಜ್‍ಮೆಂಟ್ ನಿಂದ ಹೂಡಿಕೆ ಆ್ಯಪ್ ಬಿಡುಗಡೆ

Upayuktha
0


ಮಂಗಳೂರು: ಟಾಟಾ ಅಸೆಟ್ ಮ್ಯಾನೇಜ್‍ಮೆಂಟ್ ಸಂಸ್ಥೆಯು ಹೂಡಿಕೆದಾರರಿಗೆ ನೆರವಾಗುವ ಉದ್ದೇಶದಿಂದ ತನ್ನ ಹೊಚ್ಚ ಹೊಸ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದೆ. ಇದನ್ನು ಬಳಕೆದಾರರಿಗೆ ಅವರ ಆರ್ಥಿಕ ಜಗತ್ತಿನ ಕುರಿತು ಸಂಪೂರ್ಣ ಚಿತ್ರಣವನ್ನು ನೀಡುವಂತೆ ವಿನ್ಯಾಸ ಮಾಡಲಾಗಿದೆ. ಸಮಗ್ರ ಡಿಜಿಟಲ್ ವೇದಿಕೆಯಂತೆ ವಿನ್ಯಾಸಗೊಳಿಸಲಾಗಿರುವ ಈ ಆ್ಯಪ್, ಸರಳತೆ, ಬುದ್ಧಿವಂತಿಕೆಯಿಂದ ಕಾರ್ಯ ನಿರ್ವಹಿಸುತ್ತದೆ ಮತ್ತು ಗ್ರಾಹಕರಿಗೆ ವೈಯಕ್ತಿಕ ಸೌಕರ್ಯ ಒದಗಿಸುತ್ತದೆ.


"ಒಂದು ಆ್ಯಪ್, ಒಂದು ನೋಟ, ಅನಂತ ಅವಕಾಶಗಳು" ಎಂಬ ಘೋಷವಾಕ್ಯಕ್ಕೆ ಇದು ಅನ್ವರ್ಥವಾಗಿದ್ದು, ಹೂಡಿಕೆಯನ್ನು ಸರಳಗೊಳಿಸುವ, ಸ್ಮಾರ್ಟ್ ಆಗಿಸುವ ಮತ್ತು ಹೆಚ್ಚು ಅವಕಾಶ ಲಭ್ಯವಾಗಿಸುವ ದೊಡ್ಡ ಹೆಜ್ಜೆಯಾಗಿದೆ. ಕಲಿಕೆ, ಹೂಡಿಕೆ ಮತ್ತು ಆರ್ಥಿಕ ಗುರಿಗಳನ್ನು ಟ್ರ್ಯಾಕ್ ಮಾಡಲು ಇದು ಅನುವು ಮಾಡಿಕೊಡುತ್ತದೆ ಎಂದು ಟಾಟಾ ಅಸೆಟ್ ಮ್ಯಾನೇಜ್ ಮೆಂಟ್ ನ ಪ್ರಧಾನ ವಿತರಣೆ ಮತ್ತು ಡಿಜಿಟಲ್ ಅಧಿಕಾರಿ ಹೇಮಂತ್ ಕುಮಾರ್ ಪ್ರಕಟಣೆಯಲ್ಲಿ ಹೇಳಿದ್ದಾರೆ.


ಇದು ಟಾಟಾ ಅಸೆಟ್ ಮ್ಯಾನೇಜ್‍ಮೆಂಟ್‍ನಲ್ಲಿ ನಡೆಯುತ್ತಿರುವ ಡಿಜಿಟಲ್ ರೂಪಾಂತರ ಪರ್ವದಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಿದೆ. ಇದು ಹಲವಾರು ಉಪಯುಕ್ತ ಫೀಚರ್‍ಗಳಿಂದ ಕೂಡಿದ್ದು, ಫೈನಾನ್ಷಿಯಲ್ ರೋಡ್ ಮ್ಯಾಪ್ ನಂತಹ ವಿಶೇಷತೆಗಳು ಗುರಿಗಳನ್ನು ನಿಗದಿಪಡಿಸಲು ಮತ್ತು ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ. ಪೋರ್ಟ್ ಫೋಲಿಯೋ 360 ಮೂಲಕ ಮ್ಯೂಚುವಲ್‍ ಫಂಡ್‌ಗಳು, ಈಕ್ವಿಟಿ ಮತ್ತು ಬ್ಯಾಂಕ್ ಖಾತೆಗಳನ್ನು ಒಂದೇ ಸ್ಥಳದಲ್ಲಿ ವೀಕ್ಷಿಸಬಹುದಾಗಿದೆ. ಇದನ್ನು ಆ್ಯಪ್ ಸ್ಟೋರ್ ಮತ್ತು ಗೂಗಲ್ ಪ್ಲೇಸ್ಟೋರ್ ನಲ್ಲಿ ಡೌನ್ ಲೋಡ್ ಮಾಡಬಹುದು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top