ಮೂಡುಬಿದಿರೆ: ದಕ್ಷಿಣ ಕೊರಿಯಾದ ಗುಮಿಯಲ್ಲಿ ನಡೆದ 26ನೇ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ ಆರು ಕ್ರೀಡಾಪಟುಗಳ ಭಾಗವಹಿಸಿ 3 ಚಿನ್ನ ಹಾಗೂ 3 ಬೆಳ್ಳಿಯ ಪದಕದೊಂದಿಗೆ ಆರು ಪದಕಗಳನ್ನು ಪಡೆದಿದ್ದಾರೆ. ಸ್ನೇಹಎಸ್ - 4x100ಮೀ ರಿಲೇ (ಚಿನ್ನ), ಶುಭ ಬಿ - 4x400ಮೀ ರಿಲೇ (ಬೆಳ್ಳಿ) ಮತ್ತು 4x400 ಮಿಕ್ಸ್ಡ್‌ರಿಲೇ (ಚಿನ್ನ), ಸಚಿನ್ - ಜಾವೆಲಿನ್ ತ್ರೋ (ಬೆಳ್ಳಿ), ಸಂತೋಷ್‌ಕುಮಾರ್- 4x400 ಮಿಕ್ಸ್ಡ್‌ರಿಲೇ (ಚಿನ್ನ), ರಿನ್ಸ್ಜೋಸೆಫ್ - 4x400 ರಿಲೇ (ಬೆಳ್ಳಿ), ಪ್ರವೀಣ್ - ತ್ರಿವಿಧ ಜಿಗಿತದಲ್ಲಿ (ಬೆಳ್ಳಿ) ಪದಕವನ್ನು ಪಡೆದಿದ್ದಾರೆ.
ಈ ಆರು ಕ್ರೀಡಾಪಟುಗಳು ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ ದತ್ತು ಸ್ವೀಕಾರದ ಕ್ರೀಡಾಪಟುಗಳಾಗಿದ್ದು ಹಿಂದೆ ನಡೆದಿರುವಂತಹ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯಗಳ ಕ್ರೀಡಾಕೂಟದಲ್ಲಿ ಭಾಗವಹಿಸಿ, ಪದಕ ವಿಜೇತರಾಗಿ, ಸಂಸ್ಥೆಗೆ ಕೀರ್ತಿತಂದಿರುತ್ತಾರೆ.
ಜಾಗತಿಕ ವಿಶ್ವವಿದ್ಯಾಲಯಗಳ ಕ್ರೀಡಾಕೂಟ-2025
ಜರ್ಮನಿಯ ರಿಯಾನ್-ರೋಹೂರ್‌ನಲ್ಲಿ ಜುಲೈ 16ರಿಂದ 27ರ ವರೆಗೆ ನಡೆಯಲಿರುವ ವರ್ಲ್ಡ್ ಯುನಿವರ್ಸಿಟಿ ಗೇಮ್ಸ್ 2025 (ಜಾಗತಿಕ ವಿಶ್ವವಿದ್ಯಾಲಯಗಳ ಕ್ರೀಡಾಕೂಟ-2025)ಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕ್ರೀಡಾ ದತ್ತು ಯೋಜನೆಯ 11 ಕ್ರೀಡಾಪಟುಗಳು ಆಯ್ಕೆಯಾಗಿದ್ದು, ಇದರೊಂದಿಗೆ ಈ ವರೆಗೆ 32 ಕ್ರೀಡಾಪಟುಗಳು ಆಯ್ಕೆಯಾಗಿ ಆಳ್ವಾಸ್ ಸಂಸ್ಥೆಯ ಕ್ರೀಡಾಕ್ಷೇತ್ರದ ಸಾಧನೆಜಾಗತಿಕ ಮಟ್ಟದಲ್ಲಿ ಪಸರುವಂತೆ ಮಾಡಿದ್ದಾರೆ.
ವಿಜೇತ ಕ್ರೀಡಾಪಟುಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವರು ಅಭಿನಂದಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ