ಮುಂಡಾಜೆ ಪ.ಪೂ. ಕಾಲೇಜು: ವಿದ್ಯಾರ್ಥಿ ಸಂಘ, ಸಹಪಠ್ಯ ಚಟುವಟಿಕೆಗಳ ಉದ್ಘಾಟನೆ

Upayuktha
0


ಮುಂಡಾಜೆ: ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ.) ಪುತ್ತೂರು ಇದರ ಅಧೀನ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಮುಂಡಾಜೆ ಪದವಿ ಪೂರ್ವ ಕಾಲೇಜು ಇದರ ವಿದ್ಯಾರ್ಥಿ ಸಂಘ, ಎನ್ ಎಸ್ ಎಸ್, ರೋವರ್ಸ್ ಮತ್ತು ರೇಂಜರ್ಸ್ ಹಾಗೂ ಇತರ ಸಂಘಗಳ ಉದ್ಘಾಟನೆ ಜೂ.27 ರಂದು ನಡೆಯಿತು.


ಉದ್ಘಾಟಕರಾಗಿ ಆಗಮಿಸಿದ ಸರಕಾರಿ ಪ್ರೌಢ ಶಾಲೆ ಕಕ್ಕಿಂಜೆಯ ಮುಖ್ಯೋಪಾಧ್ಯಾಯರಾದ ಶಂಭು ಶಂಕರ ಅವರು, ‘ದೇಶದ ಬೆಳವಣಿಗೆಗೆ ವಿದ್ಯಾವಂತ ಯುವಕರ ಪಾಲ್ಗೊಳ್ಳುವಿಕೆ ನಿರ್ಣಾಯಕವಾದುದು, ಸೇವಾಮನೋಭಾವನೆ, ನಾಯಕತ್ವ ಹಾಗೂ ಜೀವನ ಕೌಶಲ್ಯಗಳನ್ನು ವಿದ್ಯಾರ್ಥಿ ಜೀವನದಲ್ಲಿ ಬೆಳೆಸಿಕೊಳ್ಳಬೇಕು' ಎಂದರು. ವಿದ್ಯಾರ್ಥಿ ನಾಯಕರಿಗೆ ಕಾಲೇಜಿನ ಪ್ರಾಂಶುಪಾಲೆ ಗೀತಾ ಪ್ರಮಾಣವಚನ ಬೋಧಿಸಿ, ಶುಭ ಹಾರೈಸಿದರು.


ವಿದ್ಯಾರ್ಥಿ ಸಂಘದ ಸಲಹೆಗಾರ ಪುರುಷೋತ್ತಮ ಶೆಟ್ಟಿ ಪ್ರಸ್ತಾವಿಸಿ, ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಂಡಾಜೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ವಿನಯಚಂದ್ರ ವಹಿಸಿದ್ದರು. ವಿದ್ಯಾರ್ಥಿ ನಾಯಕರು ವೇದಿಕೆಯಲ್ಲಿ ಉಪಸ್ಥಿತರಿದ್ದು, ವಿದ್ಯಾರ್ಥಿ ಪ್ರತಿನಿಧಿಗಳ ಪರವಾಗಿ ಮೋಕ್ಷಿತಾ ತಮ್ಮ ಮುಂದಿನ ಯೋಜನೆಗಳ ಬಗ್ಗೆ ತಿಳಿಸಿದರು. ಉಪನ್ಯಾಸಕಿ ನಮಿತಾ ಕೆ. ಆರ್ ನಿರೂಪಿಸಿ, ಉಪನ್ಯಾಸಕ ಪದ್ಮನಾಭ ಬಿ.ಕೆ. ಇವರು ವಂದಿಸಿದರು. ಎಲ್ಲಾ ಉಪನ್ಯಾಸಕರು ಸಹಕರಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top