'ಸೃಷ್ಟಿ ಐಡಿಯಾಥಾನ್-2025': ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ NMIT ಗೆ ಪ್ರಥಮ ಬಹುಮಾನ

Chandrashekhara Kulamarva
0


ಬೆಂಗಳೂರು: ಪರಿಸರಸ್ನೇಹಿ ವೇಗನಿಯಂತ್ರಕ, ದ್ವಿಮುಖ ಅಕ್ಷರೇಖೆಯ ‘ಗಾಳಿ ತಿರುಬಾನಿ’ (Wind turbine) ಯಂತ್ರದ ವೈಜ್ಞಾನಿಕ ವಿನ್ಯಾಸ ಹಾಗೂ ತಂತ್ರಜ್ಞಾನಾಧರಿತ ಅಭಿವೃದ್ಧಿಗಾಗಿ ಬೆಂಗಳೂರಿನ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ನಾಲ್ವರು ವಿದ್ಯಾರ್ಥಿಗಳ ತಂಡ ರಾಜ್ಯಮಟ್ಟದ ಸಂಶೋಧನಾ ಪ್ರತಿಭಾನ್ವೇಷಣೆಯ ಸ್ಫರ್ಧೆಯಲ್ಲಿ ಪ್ರಪ್ರಥಮ ಬಹುಮಾನ ಗಳಿಸಿದೆ.


ಆಚಾರ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಯೋಜಿಸಿದ್ದ ‘ಸೃಷ್ಟಿ ಐಡಿಯಾಥಾನ್ 2025’ ಶೀರ್ಷಿಕೆಯಡಿಯ ಈ ಸ್ಫರ್ಧೆಯಲ್ಲಿ ರಾಜ್ಯಾದ್ಯಂತ ಇರುವ 150ಕ್ಕೂ ಅಧಿಕ ಇಂಜಿನಿಯರಿಂಗ್ ಕಾಲೇಜುಗಳ ತಂಡಗಳು ಪಾಲ್ಗೊಂಡಿದ್ದವು.


ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಸಹಪ್ರಾಧ್ಯಾಪಕ ಡಾ. ಎಲ್. ಹರೀಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಈ ವಿನೂತನ ಆವಿಷ್ಕಾರವನ್ನು ಸಿದ್ಧಪಡಿಸಿದ ಎರಡನೇ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಯುವ ಸಂಶೋಧಕರ ತಂಡದ ಸದಸ್ಯರು: ತನುಷ್ ಎಸ್.ಎನ್, ಕೆವಿನ್ ಜೋಸೆಫ್, ಅಭಯ್ ಪಿ.ಎಸ್ ಮತ್ತು ಜೀವನ್ ಎಸ್.


‘ಪರಿಸರಕ್ಕೆ ಹಾನಿಯಾಗದಂತೆ ಈ ಯಂತ್ರವನ್ನು ವಿನ್ಯಾಸಗೊಳಿಸಲಾಗಿದೆ. ಇದರಿಂದ ನಮ್ಮ ಅನೇಕ ತಾಂತ್ರಿಕ ಸವಾಲುಗಳಿಗೆ ಪರಿಹಾರ ಲಭಿಸುವುದು ಖಚಿತ’ ಎಂದು ಡಾ. ಎಲ್.  ಹರೀಶ್ ಕುಮಾರ್ ತಿಳಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top