ಧರ್ಮತ್ತಡ್ಕ: ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆ, ಧರ್ಮತ್ತಡ್ಕದಲ್ಲಿ 2025–26ನೇ ಸಾಲಿನ ವಿವಿಧ ಕ್ಲಬ್‌ಗಳ ಉದ್ಘಾಟನೆ ಜರಗಿತು.
ಶಾಲಾ ವ್ಯವಸ್ಥಾಪಕ ಎನ್ ಶಂಕರನಾರಾಯಣ ಭಟ್ ವಿಜ್ಞಾನದ ಮೆಗ್ನೀಶಿಯಂ ರಿಬ್ಬನ್ ಉರಿಸುವ ಪ್ರಯೋಗದ ಮೂಲಕ ವಿವಿಧ ಕ್ಲಬ್ ಗಳ ಉದ್ಘಾಟನೆಯನ್ನು ನೆರವೇರಿಸಿದರು. "ಮೆಗ್ನೀಶಿಯಂ ರಿಬ್ಬನ್ ಉರಿಸುವಂತೆ ಅದರ ಪ್ರಜ್ವಲನೆಯ ಬೆಳಕಂತೆ ವರುಷ ಪೂರ್ತಿ ಶಾಲೆಯ ಚಟುವಟಿಕೆಯಲ್ಲಿ ಪ್ರಕಾಶಮಾನವಾಗಿ ಪ್ರತಿಯೊಬ್ಬ ವಿದ್ಯಾರ್ಥಿ ಬೆಳಗುವಂತಾಗಬೇಕು" ಎಂದು ಅಭಿಪ್ರಾಯಪಟ್ಟರು.
ಮುಖ್ಯೋಪಾಧ್ಯಾಯ ಶಶಿಕುಮಾರ್ ಪಿ ಪ್ರಾಸ್ತಾವಿಕವಾಗಿ ಮಾತನಾಡಿ, ಕ್ಲಬ್‌ಗಳ ಮಹತ್ವ ತಿಳಿಸಿದರು. ಶಿಕ್ಷಕಿಯರಾದ ಶ್ರೀಮತಿ ಗಂಗಮ್ಮ ಎನ್, ಶ್ರೀಮತಿ ಸುನಿತಾ ಕೆ ಶುಭ ಹಾರೈಸಿದರು.
ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು. ವಿದ್ಯಾರ್ಥಿಗಳಾದ ಶ್ರೇಯಸ್ ವಿ ಎಸ್ ಸ್ವಾಗತಿಸಿ, ಕುಮಾರಿ ನಿಶಿಕ ನಿರೂಪಿಸಿ, ಕುಮಾರಿ ರಕ್ಷಾ ಕೆ ಪಿ ವಂದಿಸಿದರು.
ನಂತರ ವಿವಿಧ ಕ್ಲಬ್‌ಗಳಿಗಾಗಿ ವಿದ್ಯಾರ್ಥಿಗಳನ್ನು ಕಾರ್ಯದರ್ಶಿ, ಜತೆ ಕಾರ್ಯದರ್ಶಿಯರಾಗಿ ಆಯ್ಕೆ ಮಾಡಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ