ಶಾಂತರಂಗ ಸಾಹಿತ್ಯ ವೇದಿಕೆ: ರಮಾಕಾಂತ ಜೋಷಿ, ಎಚ್‌ಎಸ್‌ವಿ ಅವರಿಗೆ ಶ್ರದ್ಧಾಂಜಲಿ

Chandrashekhara Kulamarva
0


ಬೆಂಗಳೂರು: ಇತ್ತೀಚೆಗೆ ನಿಧನರಾದ ಶ್ರೀ ರಮಾಕಾಂತ ಜೋಷಿ (ಮನೋಹರ ಗ್ರಂಥಮಾಲೆ ಧಾರವಾಡ) ಹಾಗೂ ಕವಿ ಹೆಚ್. ಎಸ್. ವೆಂಕಟೇಶ ಮೂರ್ತಿ ಅವರಿಗೆ ಅಕ್ಷಯ ನಗರದಲ್ಲಿನ ಶಾಂತರಂಗ ಸಾಹಿತ್ಯ ವೇದಿಕೆ ಆಶ್ರಯದಲ್ಲಿ ಶನಿವಾರ ಶ್ರದ್ಧಾಂಜಲಿ ಅರ್ಪಿಸಲಾಯಿತು.  ಹೆಚ್. ಎಸ್. ವಿ. ವಿದ್ಯಾರ್ಥಿನಿ ಯಾಗಿದ್ಧ ಜಾಹ್ನವಿ ಪಾಟೀಲ್ ಹಳ್ಳೂರ ವೆಂಕಟೇಶ ಮೂರ್ತಿ ಅವರ ಗೀತ ಗಾಯನ ನಡೆಸಿಕೊಟ್ಟರು.


ಜಯಶ್ರೀ ಸುಧೀಂದ್ರ ಧಾರವಾಡದ ಮನೋಹರ ಗ್ರಂಥಮಾಲೆಯ ಬೆಳವಣಿಗೆಯಲ್ಲಿ ರಮಾಕಾಂತ ಜೋಶಿ ಅವರ ಕೊಡುಗೆಯನ್ನು ಸ್ಮರಿಸಿದರು.

ಇದೇ ಸಂದರ್ಭದಲ್ಲಿ ತ.ರಾ.ಸು. ರವರ  'ಮೊದಲ ನೋಟ' ಕಾದಂಬರಿಯಲ್ಲಿನ ಗ್ರಾಮೀಣ ಕೌಟಂಬಿಕ ಜೀವನದ ಚಿತ್ರಣ ಕುರಿತು  ಪ್ರತಿಭಾ ಕಾವ್ಯಶ್ರೀ, ಬಿ.ಎಸ್. ಸತ್ಯನಾರಾಯಣ ರಾವ್ ಮತ್ತು ಡಾ. ಎಸ್. ನಂಜುಂಡಸ್ವಾಮಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ವಿನ್ಯಾಸ ಬಿದರಕುಂದಿ, ವಿಜಯಾ ಓಂಕಾರ್, ರವಿಕುಮಾರ್, ಸುಧೀಂದ್ರ, ಚಂದ್ರಶೇಖರ ಉಡುಪ ಹಾಜರಿದ್ದರು.



إرسال تعليق

0 تعليقات
إرسال تعليق (0)
To Top