ಶ್ರೀ ಧ.ಮಂ ಪ.ಪೂ ಕಾಲೇಜಿನಲ್ಲಿ "ಭಿತ್ತಿಪತ್ರಿಕೆ" ಅನಾವರಣ

Upayuktha
0


ಉಜಿರೆ: 'ಭಿತ್ತಿಪತ್ರಿಕೆ ಆಕರ್ಷಕವಾಗಿ ಕಾಣಬೇಕಾದರೆ ಅದರಲ್ಲಿ ಸೃಜನಾತ್ಮಕತೆ ಇರಬೇಕು ಮತ್ತು ವೈಶಿಷ್ಟ್ಯಪೂರ್ಣವಾದ ಮಾಹಿತಿಯನ್ನು ಒಳಗೊಂಡಿರಬೇಕು. ವಿದ್ಯಾರ್ಥಿಗಳ ಕೌಶಲ್ಯ ಅರಿಯಲು ಇದೊಂದು ಸಾಧನವಾಗಿದೆ' ಎಂದು ಉಜಿರೆಯ ಶ್ರೀ ಧ. ಮಂ. ಕಾಲೇಜು (ಸ್ವಾಯತ್ತ)  ಇಲ್ಲಿನ   ಬಿ.ವೋಕ್, ಪೂರೈಕೆ ಸರಪಳಿ ನಿರ್ವಹಣೆ ವಿಭಾಗದ ಮುಖ್ಯಸ್ಥ ಅಶ್ವಿತ್ ಹೆಚ್ ಆರ್ ಅವರು ಹೇಳಿದರು.


ಅವರು ಉಜಿರೆಯ ಶ್ರೀ ಧ.ಮಂ. ಪದವಿ ಪೂರ್ವಕಾಲೇಜಿನ ಎಲ್ಲ ವಿಭಾಗಗಳ ಹಾಗೂ ಕ್ಲಬ್‌ಗಳ ಭಿತ್ತಿಪತ್ರಿಕೆಗಳನ್ನು ಅನಾವರಣಗೊಳಿಸಿ ಮಾತನಾಡಿದರು.


ಈ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾದ, ಮಾಹಿತಿಪೂರ್ಣವಾದ ಸಂಗತಿಗಳನ್ನು ಮತ್ತು ಸಾಧಕರ ವಿಷಯಗಳನ್ನು ಪ್ರಸ್ತುತಪಡಿಸಿದರು.



ಕಾಲೇಜಿನ ಪ್ರಾಚಾರ್ಯರಾದ ಪ್ರಮೋದ್ ಕುಮಾರ್ ಬಿ. ಇವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಉಳಿದವರಿಗಿಂತ ಭಿನ್ನವಾಗಿ ಮಾಡುವ ಸೃಜನಾತ್ಮಕ ಕಾರ್ಯಗಳು ಯಾವತ್ತೂ ಹೆಚ್ಚಿನ ಯಶಸ್ಸನ್ನು ಪಡೆಯುತ್ತವೆ ಎಂದು ಸಾಧಕರ ಉದಾಹರಣೆ ಸಹಿತ ತಿಳಿಸಿದರು.


ಉಪ ಪ್ರಾಂಶುಪಾಲರಾದ ಡಾ. ರಾಜೇಶ್ ಬಿ ಹಾಗೂ ಕಾರ್ಯಕಾರಿ ಸಮಿತಿ ಮುಖ್ಯಸ್ಥೆ ಶ್ರೀಮತಿ ಬೇಬಿ ಎನ್., ಸದಸ್ಯರಾದ ಸವಿತಾ ಎಸ್, ಮನೋಹರ್ ಶೆಟ್ಟಿ, ಸ್ಮಿತಾ ಬೇಡೇಕರ್, ಮಹಾವೀರ್ ಜೈನ್, ಸುಪ್ರೀತಾ ಪಡಿವಾಳ್ ಹಾಗೂ ಪ್ರಾಧ್ಯಾಪಕ ವೃಂದ ಉಪಸ್ಥಿತರಿದ್ದರು.


ವಿದ್ಯಾರ್ಥಿನಿ ಹಂಸಿನಿ ಭಿಡೆ ಕಾರ್ಯಕ್ರಮ ನಿರೂಪಿಸಿ, ಪರಿಚಯ ಮಾಡಿದರು. ನಿಜ ಕುಲಾಲ್ ಸ್ವಾಗತಿಸಿ, ಧನ್ಯವಾದ ಅರ್ಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top