ಉಜಿರೆ: ಶ್ರೀ ಧ.ಮಂ. ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ಸಂಘ ಉದ್ಘಾಟನೆ ಹಾಗೂ ಲೆಕ್ಕ ಪರಿಶೋಧಕರ ದಿನವನ್ನು ಆಚರಿಸಲಾಯಿತು. ಮಂಗಳೂರು ಪಿರೇರಿಯನ್ ಸರ್ವಿಸಸ್‌ನ ಮ್ಯಾನೇಜರ್ ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಸಿ.ಎ. ಸುಕನ್ಯಾ ಕಾಮತ್ ಉದ್ಘಾಟನೆ ನೆರವೇರಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದು ತಿಳಿಸಿದರು.
ಅಯ್ಕೆಯ ವಿಷಯದಲ್ಲಿ ಇತರ ವಿಧ್ಯಾರ್ಥಿಗಳ ಆಯ್ಕೆಯನ್ನು ಸ್ವೀಕರಿಸುವುದಕ್ಕಿಂತ ತಮಗೆ ಸಮಂಜಸವಾದ ಅಯ್ಕೆಯನ್ನು ಸ್ವೀಕರಿಸಬೇಕು. ವಿದ್ಯಾರ್ಥಿಗಳು ಕಾಲೇಜಿನಲ್ಲಿ ಸಿಗುವ ಎಲ್ಲಾ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಬೆಳೆಯಬೇಕು. ಇಂದು ವಾಣಿಜ್ಯ ವಿದ್ಯಾರ್ಥಿಗಳಿಗೆ ಹಲವಾರು ವೃತ್ತಿ ಅವಕಾಶಗಳಿವೆ. ಆದರೆ ಕೌಶಲ್ಯಕ್ಕೆ ಮಹತ್ವ ನೀಡಿದರೆ ಮಾತ್ರ ಎಷ್ಟು ಎತ್ತರಕ್ಕೂ ಬೆಳೆಯಬಹುದು ಎಂದರು.
ಪ್ರಾಂಶುಪಾಲ ಫ್ರೊಪೆಸರ್ ಪ್ರಮೋದ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಡತನದಿಂದ ಮೇಲೆ ಬಂದು ವೃತ್ತಿಯಿಂದ ಶೇರು ಮಾರುಕಟ್ಟೆಯನ್ನು ಆಳಿದ ಹಲವಾರು ಶ್ರೀಮಂತರ ಸಾಹಸಗಾಥೆಯನ್ನು ವಿವರಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವಿಭಾಗ ಮುಖ್ಯಸ್ಥೆ ಬೇಬಿ ಎನ್., ಸಂಯೋಜಕಿ ಸವಿತ, ಉಪನ್ಯಾಸಕಿಯರಾದ ಪ್ರಭಾವತಿ, ಶೋಭ ಹಾಗೂ ಅಶ್ವಿನಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಅನಿಕ ತಂಡ ಪ್ರಾರ್ಥಿಸಿ ಸಂಘದ ಅಧ್ಯಕ್ಷ ಧರ್ಮತೇಜ ಸ್ವಾಗತಿಸಿ ಕಾರ್ಯದರ್ಶಿ ಸಿರಿ ಧನ್ಯವಾದ ನೀಡಿದರು. ವಿದ್ಯಾರ್ಥಿನಿಯರಾದ ಹಂಸಿನಿ ಭಿಡೆ ಹಾಗೂ ಅಂಶುಲಾ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ