ಅರಸಿ ಬಂದ ಪ್ರಶಸ್ತಿಗಳಿಗೆ ಬೆನ್ನು ತಿರುಗಿಸಿದವರನ್ನು ನೆನೆಯುತ್ತ...

Upayuktha
0

.



ಬಾನು ಮುಷ್ತಾಕ್ ಅವರು ಕನ್ನಡಕ್ಕೆ ಹಾಗೂ ಭಾರತಕ್ಕೆ 'ಬೂಕರ ಬೂಸ್ಟ್' ತುಂಬಿ ಗರಿ ಮೂಡಿಸಿದ್ದಾರೆ. ಅವರಿಗೆ ಅಭಿನಂದನೆಗಳು. ಲಾಸ್ಟ್ ಲ್ಯಾಂಪ್ ಕನ್ನಡಕ್ಕೆ ಬೆಳಕಾಯಿತು, ಬೆಳಗಾಯಿತು, ಪ್ರಜ್ವಲಮಾನವಾಯಿತು. ಸಾರಾ ಅಬೂಬಕರ್, ಬಾನು ಮುಷ್ತಾಕ... ಇತರೆಲ್ಲ ಲಂಕೇಶರ ಶೋಧ. ನಿಜಕ್ಕೂ ಲಂಕೇಶ ಕನ್ನಡಕ್ಕೆ ಮಹತ್ತರ ಕೊಡುಗೆ ನೀಡಿದರು. ತೇಜಸ್ವಿ ಅಂತೂ ಕನ್ನಡದ ಅಸ್ಮಿತೆ. ತೇಜಸ್ವಿ ಸಾಹಿತ್ಯ ಎಂಥಹುದೆಂದರೇ ಅದು ನಿಜಕ್ಕೂ ನೋಬೆಲ್ ಮೀರಿದ್ದು. ಅವರ ಒಂದು ಪುಸ್ತಕ ಇತ್ತಿಚೆಗೆ 78ನೇ ಮುದ್ರಣ ಕಂಡಿತು! 'ಕರ್ವಾಲೊ' ಅದ್ಭುತ ಕೃತಿ. ತೇಜಸ್ವಿಗೆ ಯಾವಾಗಲೋ 'ಜ್ಞಾನಪೀಠ' ಸಿಗಬೇಕಿತ್ತು. ಆದರೆ... ಸಿಗಲಿಲ್ಲ! ಪ್ರಶಸ್ತಿಗಳ ಬಗ್ಗೆ ತೇಜಸ್ವಿಗೆ ಒಂಥರ ತಾತ್ಸಾರ!


ಅವರಿಗೆ ಕರ್ನಾಟಕ ಸರ್ಕಾರ ಪಂಪ ಪ್ರಶಸ್ತಿ ನೀಡಿತು. ಅವರಿಗೆ ಆ ಬಗ್ಗೆ ಸಂಬಂಧಪಟ್ಟವರು ಫೋನ್ ಮಾಡಿ ಹೇಳಿದಾಗ ಅವರು ನನಗೆ ಬೇಡ ಅಂದರು. ಮತ್ತೆ ಒತ್ತಾಯಿಸಿದಾಗ,' ನೋ ನೋ..... ನಾನೀಗ ಮೀನು ಹಿಡಿಯಲು ಹೋಗಬೇಕು, ನನಗೆ ಬರಲಿಕ್ಕೆ ಆಗಲ್ಲ ಎಂದರು! ಇದು ತೇಜಸ್ವಿ! ಎಂಥೆಂಥಾ ಅದ್ಭುತಗಳನ್ನೂ ಕಂಡಿದ್ದೇವೆ... ಮತ್ತೆ 'ಅದರ' ಹಿಂದೆ ಬಿದ್ದವರನ್ನೂ ಕಂಡಿದ್ದೇವೆ. ಅಂತೂ ಬೂಕರ ಮೂಲಕ ಇದೆಲ್ಲಾ ಬರೆಯುವಂತಾಯಿತು.


- ಶ್ರೀನಿವಾಸ ಜಾಲವಾದಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top